ಯೋಗಕ್ಕೆ ವಿಶ್ವವ್ಯಾಪಿ ಮಹತ್ವ

somanna
ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಅಭಿನಂದಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಯೋಗದ ಮಹತ್ವ ವಿಶ್ವವ್ಯಾಪಿಯಾಗಿದೆ, ವಿಶ್ವ ಯೋಗ ದಿನದಂದು ವಿಶ್ವದ ಸುಮಾರು 176 ದೇಶಗಳಲ್ಲಿ ಯೋಗ ಪ್ರದರ್ಶನ ನಡೆಯುತ್ತಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ ಪ್ರಧಾನಿ ಮೋದಿ ಅವರು ವಿಶ್ವನಾಯಕನಾಗಿ ಮನ್ನಣೆಗಳಿಸಿದ್ದಾರೆ ಎಂದರು.
ಮಠ ಮಾನ್ಯಗಳು ನಮ್ಮೆಲ್ಲರಿಗೂ ನೆಮ್ಮದಿ ಶಾಂತಿ ನೀಡುವ ಧಾರ್ಮಿಕ ಕೇಂದ್ರಗಳಾಗಿವೆ ಮಠಗಳಿಂದ ಕಲಿಯುವು ಸಾಕಷ್ಟಿದೆ ಎಂದರು. ಈ ಮಠದ ಸ್ವಾಮೀಜಿ ಅವರು ಅನೇಕ ಅನಾಥ ಮಕ್ಕಳಿಗೆ ಆಶ್ರಯದಾತರಾಗಿದ್ದಾರೆ ವೃದ್ಧಾಶ್ರಮದ ಮೂಲಕ ಹಿರಿಯ ಜೀವಗಳಿಗೆ ಆಸರೆಯಾಗಿದ್ದಾರೆ ಎಂದರು. ವನಕಲ್ಲು ಮಠದ ಸರ್ವಾಂಗೀಣ ಪ್ರಗತಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ರಾಜ್ಯದ ಸಿಎಂ ಆಗಲಿ: ವನಕಲ್ಲು ಮಠದ ಡಾ.ಶ್ರೀ.ಬಸವರಮಾನಂದ ಸ್ವಾಮೀಜಿ ಮಾತನಾಡಿ. ಕೇಂದ್ರ ಸಚಿವ ಸೋಮಣ್ಣ ಅವರಿಗೆ ಸಮಾಜ ಸೇವೆ ಮಾಡುವ ಮನಸ್ಸು ಇದೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಸೇವೆ ಮಾಡುವ ಅವಕಾಶ ಸಿಗುವಂತಾಗಲಿ ಎಂದು ಆಶೀರ್ವದಿಸಿದರು. ಸೋಂಪುರ ನಿಡವಂದದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೇಗೇರಿಸಬೇಕು ಎಂದುಬೆಂಗಳೂರು ಗ್ರಾಮಾಂತರ ಪ್ರಕೋಷ್ಟದ ಸಂಚಾಲಕ ಎಚ್.ಕೆ. ರವೀಶ ಇದೇ ವೇಳೆ ಸಚಿವರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net