ಸಂಸದರ ಕಚೇರಿ ವಿಷಯದಲ್ಲು ಕಾಂಗ್ರೆಸ್​ ಸರ್ಕಾರದ ದ್ವೇಷದ ರಾಜಕಾರಣ

Somanna_Office11
Published on

ತುಮಕೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಜನಸಂಪರ್ಕ ಕಾರ್ಯಾಲಯ ಕಟ್ಟಡ ಇದೀಗ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗಿದೆ. ನಗರದ ಪ್ರವಾಸಿ ಮಂದಿರದ ಆವರಣದಲ್ಲಿನ ಹಳೇ ಸಕ್ಯೂರ್ಟ್​ ಹೌಸ್​ ಅನ್ನು 15 ಲಕ್ಷ ರೂ., ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದಲೇ ನವೀಕರಣ ಮಾಡಿ ಇನ್ನೇನು ಸೋಮಣ್ಣ ಕಚೇರಿ ಉದ್ಘಾಟನೆಗೆ ಮಹೂರ್ತ ನಿಗದಿ ಮಾಡಿದ್ದಾಗಲೇ ರಾಜ್ಯ ಸರ್ಕಾರ ಕಚೇರಿ ಹಿಂಪಡೆಯುವ ಆದೇಶ ಹೊರಡಿಸಿರುವುದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ&ಜೆಡಿಎಸ್​ ಶಾಸಕರು ಸಿಡಿದೇಳಲು ಕಾರಣವಾಗಿದೆ. ಸಂಸದ ಕಚೇರಿ ಪ್ರತಿಷ್ಠೆಯ ಕಾಳಗದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹೈರಾಣಾಗಿ ಹೋಗಿದ್ದಾರೆ.

ಜೂನ್​ 19ರಂದು ಕೇಂದ್ರ ಸಚವಿ ಸೋಮಣ್ಣರ ಕೋರಿಕೆ ಮೇರೆಗೆ ಸಕ್ಯೂರ್ಟ್​ ಹೌಸ್​ ಅನ್ನು ಜನಸಂಪರ್ಕ ಕಚೇರಿ ಆರಂಭಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರರ ಮೌಖಿಕ ಆದೇಶದ ಬಳಿಕ ನವೀಕರಣ ಕಾಮಗಾರಿ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟವರಿಗೆ ಶುಭಕಲ್ಯಾಣ್​ ಸೂಚಿಸಿದ್ದರು. ರಾಜ್ಯ ಸರ್ಕಾರದ ಮೇಲೆ ಪ್ರಭಾವ, ಒತ್ತಡ ಹೇರಿದ್ದ ಸೋಮಣ್ಣ ಕೊನೆಗೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾಯದರ್ಶಿ ಅವರಿಂದಲೇ ಆ.3 ರಂದು ಪ್ರವಾಸಿ ಮಂದಿರದ ಆವರಣದಲ್ಲಿನ ಸಕ್ಯೂರ್ಟ್​ ಹೌಸ್​ ನೀಡುವಂತೆ ಆದೇಶ ಹೊರಡಿಸುವಲ್ಲಿ ಯಶಕಂಡಿದ್ದರು. ಈ ಬೆನ್ನಲ್ಲೇ ತ್ವರಿತಗತಿಯಲ್ಲಿ ನವೀಕರಣ ಕಾಮಗಾರಿ ಪೂರ್ಣಗೊಳಿಸಿ ಆ.18 ರಂದು ಕಚೇರಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಮಧ್ಯೆ ಶುಕ್ರವಾರ ಬೆಳಗ್ಗೆ ಸರ್ಕಾರ ಮತ್ತೊಂದು ಆದೇಶ ಹೊರಡಿಸಿ ಕಚೇರಿಯನ್ನು ಹಿಂಪಡೆದಿರುವುದು ಸಂರ್ಷಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ತರಾತುರಿಯಲ್ಲಿ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್​ಬಾಬು ನೇತೃತ್ವದಲ್ಲಿ ಬಿಜೆಪಿ ಶಾಸಕರಾದ ಬಿ.ಸುರೇಶ್​ಗೌಡ, ಜಿ.ಬಿ.ಜ್ಯೋತಿಗಣೇಶ್​ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಹರಿಹಾಯ್ದರು.

ದ್ವೇಷದ ರಾಜಕಾರಣ ಕೇಂದ್ರ ಸಚಿವ ವಿ.ಸೋಮಣ್ಣರ ಜನಸಂಪರ್ಕ ಕಾರ್ಯಾಲಯಕ್ಕೆ ಪ್ರವಾಸಿ ಮಂದಿರದ ಸಕ್ಯೂರ್ಟ್​ಹೌಸ್​ ಅನ್ನು ನೀಡಿ, ಅನುಮೋದನೆ ಮಾಡಿದ್ದ ರಾಜ್ಯ ಕಾಂಗ್ರೆಸ್​ ಸರ್ಕಾರ ಇದೀಗ ಆದೇಶ ಹಿಂಪಡೆದಿರುವ ಕ್ರಮವನ್ನು ಬಿಜೆಪಿ &ಜೆಡಿಎಸ್​ ಶಾಸಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ ಶಾಸಕರು, ಯಾವುದೇ ಕಾರಣಕ್ಕೂ ಸಚಿವ ವಿ.ಸೋಮಣ್ಣ ಕಚೇರಿಗೆ ನೀಡಿರುವ ಕಟ್ಟಡವನ್ನು ವಾಪಸ್​ ನೀಡುವುದಿಲ್ಲ ಎಂದು ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದರು.

ಈ ರಾಜಕಾರಣದಲ್ಲಿ ನಾವು ಜಿಲ್ಲಾಧಿಕಾರಿಗಳನ್ನು ತರಲಲು ಇಷ್ಟಪಡುವುದಿಲ್ಲ. ಅವರು ಮೇಲಿನವರ ಆದೇಶ ಪಾಲಿಸಬೇಕಾಗುತ್ತದೆ. ಆದರೆ, ಇದರ ಹಿಂದೆ ಯಾರಿದ್ದಾರೆ ಎಂಬುದು ನಮಗೂ ಗೊತ್ತಿದೆ. ಯಾರು ಯಾರನ್ನು ಯಾವಾಗ ಭೇಟಿ ಮಾಡಿದ್ದರು ಎಂಬುದು ನಮಗೂ ಗೊತ್ತಿದೆ. ಇದರ ನೇರ ಹೊಣೆಯ್ನು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್​ ಹೊತ್ತುಕೊಳ್ಳಬೇಕು. ಸಜ್ಜನ ರಾಜಕಾರಣಿ ಎಂದು ಹೆಸರು ಮಾಡಿರುವರು ಮಾಡುವ ಕೆಲವೇ ಇದು. ಬಿ.ಸುರೇಶ್​ಗೌಡ ಗ್ರಾಮಾಂತರ ಶಾಸಕ ಕೇಂದ್ರ ಸಚಿವರ ಕಚೇರಿಗೆಂದು ಕೊಟ್ಟ ಕಟ್ಟಡವನ್ನು ವಾಪಸ್​ ಪಡೆಯಲು ರಾಜ್ಯ ಸರ್ಕರ ಹೊರಟಿದೆ. ಒಮ್ಮೆ ಕೊಟ್ಟು ಮತ್ತೆ ವಾಪಸ್​ ಪಡೆಯುವುದನ್ನು ಕಾಂಗ್ರೆಸ್​ ಸರ್ಕಾರ ದಂಧೆ ಮಾಡಿಕೊಂಡಂತಿದೆ. ಕಚೇರಿ ಜಾಗವನ್ನು ಸರ್ಕಾರ ಸಚಿವರ ಸ್ವಂತಕ್ಕೆ ನೀಡಿಲ್ಲ, ಕೇಂದ್ರ ಸರ್ಕಾರದ ಮಂತ್ರಿಯಾಗಿ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ, ಸಾರ್ವಜನಿಕರ ಕೆಲಸಕಾರ್ಯಗಳನ್ನು ನಿರ್ವಹಣೆ ಮಾಡಲು ಕೊಟ್ಟಿದೆ. ಈಗ ವಾಪಸ್​ ಪಡೆಯುವ ಪ್ರಯತ್ನದೊಂದಿಗೆ ರಾಜ್ಯ ಸರ್ಕಾರ ಕೆಟ್ಟ ರಾಜಕಾರಣ ಮಾಡಲು ಹೊರಟಿದೆ ಎಂಬ ಅನುಮಾನ ಮೂಡುತ್ತಿದೆ. ರಾಜ್ಯ ಸರ್ಕಾರ ಗೌರವಯುತವಾಗಿ ನಡೆದುಕೊಳ್ಳಲಿ. ಸಿ.ಬಿ.ಸುರೇಶ್​ಬಾಬು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net