

ಸೊರಬ: ತಾಲೂಕಿನ ಶಿಗ್ಗಾ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸೋಮಮ್ಮ, ಶಿವಮೂರ್ತಿ ಅವಿರೋಧವಾಗಿ ಆಯ್ಕೆಯಾದರು.
8 ಸದಸ್ಯ ಬಲದ ಪಂಚಾಯಿತಿಯಲ್ಲಿ ಕಾಂಗ್ರೆಸ್‌ನ ನಾಗರಾಜ್ ತಳೆಬೈಲು ಹಾಗೂ ಬಿಜೆಪಿಯ ಲೋಕಪ್ಪ ಗೈರಾಗಿದರು. ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಅಧಿಕಾರಿ ಎಂ.ನಾಗರಾಜ್ ಕಾರ್ಯನಿರ್ವಹಿಸಿದ್ದು ಪಿಡಿಒ ಜಗದೀಶ್ ಸಹಕರಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿಪಂ ಮಾಜಿ ಸದಸ್ಯೆ ತಾರಾ ಶಿವಾನಂದ್, ಮಾಜಿ ತಾಪಂ ಅಧ್ಯಕ್ಷ ಗಣಪತಿ, ಮಾಜಿ ಸದಸ್ಯ ನಾಗರಾಜ್ ಚಿಕ್ಕಸವಿ, ಪ್ರಭಾಕರ್ ಇತರರಿದ್ದರು.