ಮಕ್ಕಳ ಪ್ರಗತಿಯಲ್ಲಿ ಮಾದರಿಯಾದ ಸೋಮಯ್ಯ ಶಾಲೆ

mlp7-1
ಮಹಾಲಿಂಗಪುರದ ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಡಾ. ಪ್ರತಿಭಾ ಮುರುಗೋಡ ಮಾತನಾಡಿದರು. ಅಭಿರಾಜ ಢವಳೇಶ್ವರ, ಮಂಗೇಶ ಶೇಟ್, ಪೂಜಾ ಓಸ್ವಾಲ್, ಅರ್ಚನಾ ಓಸ್ವಾಲ್, ವೈಶಾಲಿ, ಗೋಕಾಂವಿ, ತಬಸೂಮ ಘೋರಿ ಮತ್ತಿತರರಿದ್ದಾರೆ.
Published on

ಮಹಾಲಿಂಗಪುರ: ಮಕ್ಕಳ ಪ್ರತಿಭೆ ಗುರುತಿಸಿ, ಅವರು ಎಲ್ಲ ರಂಗಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆ ಮಾದರಿಯಾಗಿದೆ ಎಂದು ಡಾ. ಪ್ರತಿಭಾ ಮುರುಗೋಡ ಹೇಳಿದರು.

ಪಟ್ಟಣದ ಕೆ.ಜೆ. ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಅಂಕ ಪಡೆಯುವ ಯಂತ್ರಗಳಂತೆ ಕಾಣದೆ, ಅವರ ಪ್ರತಿಭೆ ಅನಾವರಣಕ್ಕೆ ಸೋಮಯ್ಯ ಶಾಲೆ ಪ್ರಯತ್ನಿಸುತ್ತಿದೆ. ಇದರಿಂದ ಮಕ್ಕಳ ವಿದ್ಯಾರ್ಜನೆ ಜತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯವಂತರಾಗಿರಲು ಸಹಕಾರಿಯಾಗಿದೆ ಎಂದರು.

ಪಿಟಿಎ ಸದಸ್ಯ ಸಂಜಯ ಯಲಶೆಟ್ಟಿ ಮಾತನಾಡಿ, ಮಕ್ಕಳನ್ನು ಶಿಸ್ತುಬದ್ಧ ವಾತಾವರಣದಲ್ಲಿ ಬೆಳೆಸುವ ಅವಶ್ಯಕತೆ ಇದೆ. ಇದರಿಂದ ಅವರು ಜೀವನದಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ವಿದ್ಯಾವಂತರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಮಹೇಶ ಆರಿ, ಅಭಿರಾಜ ಢವಳೇಶ್ವರ, ಮಂಗೇಶ ಶೇಟ್, ಪೂಜಾ ಓಸ್ವಾಲ್, ಅರ್ಚನಾ ಓಸ್ವಾಲ್, ವೈಶಾಲಿ, ಗೋಕಾಂವಿ, ತಬಸೂಮ ಘೋರಿ, ಸೀಮಾ ಕಾಡದೇವರ, ಸ್ಮೀತಾ ಸಬಕಾಳೆ, ರಮಾ ಕಮಲಾಕರ, ಅಹಲ್ಯಾ ಪಾಟೀಲ, ವೈಭವಿ ಮೈಂಡ, ದರೀತ್ರಿ ಜ್ಯೋಶಿ, ಸುರೇಶ ಬಾಗಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net