ರೈಲು ಪ್ರಯಾಣಿಕರ ಸಮಸ್ಯೆ ಪರಿಹಾರ : ಕೇಂದ್ರ ಸಚಿವಗೆ ಎಂ.ಎಲ್ ಅಶ್ವಿನಿ ಮನವಿ

New Project (10)
Published on

ಕಾಸರಗೋಡು: ಜಿಲ್ಲೆಯ ರೈಲು ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರ ಜತೆಗೆ ರೈಲ್ವೆ ವಲಯದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮೂಲಕ ಒತ್ತಡ ಹೇರಿರುವುದಾಗಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್.ತಿಳಿಸಿದರು.

ದೂರದೂರುಗಳಿಗೆ ಸಂಚರಿಸುವ ರೈಲುಗಳಿಗೆ ಜಿಲ್ಲೆಯ ಕಾಞಂಗಾಡ್ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವುದು, ಕಾಞಂಗಾಡ್ ನಿಲ್ದಾಣಕ್ಕೆ ಅಮೃತ್ ಸ್ಟೇಷನ್ ಸ್ಥಾನಮಾನ ನೀಡುವುದು, ಕೊಟ್ಟಿಕುಳಂ ರೈಲು ನಿಲ್ದಾಣದಲ್ಲಿ ಪರಶುರಾಮ್ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಕಲ್ಪಿಸುವುದು, ರಿಸರ್ವೇಶನ್ ಕೌಂಟರ್‌ಗಳ ಸೂಕ್ತ ನಿರ್ವಹಣೆ, ಶೋರ್ನೂರು-ಕಣ್ಣೂರು ಮೆಮು ರೈಲನ್ನು ಮಂಗಳೂರಿಗೆ ವಿಸ್ತರಿಸುವುದು ಮೊದಲಾದ ಬೇಡಿಕೆಗಳನ್ನು ಹೊಂದಿದ ಮನವಿಯನ್ನು ಅಶ್ವಿನಿ ಎಂಎಲ್ ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಎಂ.ಬಲರಾಜ್ ನಾಯ್ಕ ಅವರೊಂದಿಗೆ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net