ಮಹದಾಯಿ ನೀರು ಹರಿದರೆ ನರಗುಂದ ರೈತರ ಸಮಸ್ಯೆ ನಿವಾರಣೆ

07 NRD-3
ನರಗುಂದದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಚಿಕ್ಕೋಡಿಗೆ ವರ್ಗಾವಣೆಗೊಂಡಿರುವ ಸಂಜೀವ ಚವ್ಹಾಣ ಅವರನ್ನು ಶುಕ್ರವಾರ ಸನ್ಮಾನಿಸಿ ಬೀಳ್ಕೊಡಲಾಯಿತು. ಆನಂದ ನರಸಣ್ಣವರ, ಜ್ಯೋತಿ ಮಾನೇದ, ಇತರರಿದ್ದರು.
Published on

ನರಗುಂದ: ತಾಲೂಕಿನಲ್ಲಿ ಬಂಗಾರ ಬೆಳೆಯುವ ಫಲವತ್ತಾದ ಭೂಮಿಗಳಿವೆ. ನೀರಿನ ಕೊರತೆಯಿಂದ ಬಹುತೇಕ ರೈತರ ಭೂಮಿ ಬರಡಾಗಿರುವುದು ಬೇಸರದ ಸಂಗತಿ. ಮಹದಾಯಿ ನೀರು ಹರಿದು ಬಂದಲ್ಲಿ ಈ ಭಾಗದ ರೈತರ ಜ್ವಲಂತ ಸಮಸ್ಯೆ ನಿವಾರಣೆಗೊಳ್ಳಲಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ಸಂಜೀವ ಚವ್ಹಾಣ ಹೇಳಿದರು.

ನರಗುಂದದಿಂದ ಚಿಕ್ಕೋಡಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಕೃಷಿ ಪದ್ಧತಿ, ನರಗುಂದ ತಾಲೂಕಿನ ಕೃಷಿ ಪದ್ಧತಿಗೆ ಬಹಳಷ್ಟು ವ್ಯತ್ಯಾಸಗಳಿವೆ. ಸಮರ್ಪಕ ನೀರಿನ ಸೌಲಭ್ಯವಿಲ್ಲದಿದ್ದರೂ ಈ ಭಾಗದ ರೈತರು ನಿರಂತರ ಪರಿಶ್ರಮದಿಂದ ಅಲ್ಪಾವಧಿಯ ಪ್ರಮುಖ ಬೆಳೆಗಳನ್ನು ಬೆಳೆದು ಆತ್ಮ ಸಂತೃಪ್ತಿ ಪಡುತ್ತಿದ್ದಾರೆ ಎಂದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಆನಂದ ನರಸಣ್ಣವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಂ. ಬಡಿಗೇರ, ಪಶು ವೈದ್ಯಾಧಿಕಾರಿ ಡಾ. ವೆಂಕಟೇಶ ಸಣ್ಣಬಿದರಿ, ನಾಗಪ್ಪ ಬೆನ್ನೂರ, ಮಂಜುನಾಥ ಹೂಗಾರ, ಯಲ್ಲಪ್ಪ ಚೆಲುವಣ್ಣವರ ಮಾತನಾಡಿದರು.

ಹಾವೇರಿಯಿಂದ ನರಗುಂದಕ್ಕೆ ತೋಟಗಾರಿಕೆ ಸಹಾಯಕರಾಗಿ ವರ್ಗಾವಾಗಿರುವ ನಿಂಗಪ್ಪ ವೆಂಕಟಾಪುರ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು. ಜ್ಯೋತಿ ಮಾನೇದ, ಮಹೇಶ ಪಾಟೀಲ, ನಿಂಗಪ್ಪ ಕರಡಿ, ಬಸವರಾಜ ಬ್ಯಾಗಿ, ಸುರೇಶ ಚವ್ಹಾಣ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net