ಗಣಿತ ಉಪಕರಣಗಳಿಂದ ಕ್ಲಿಷ್ಠಕರ ಸಮಸ್ಯೆಗಳಿಗೆ ಪರಿಹಾರ

UPBR GANITA MELA
Published on

ಉಪ್ಪಿನಬೆಟಗೇರಿ: ಗಣಿತ ಮೇಳದಲ್ಲಿ ಉಪಕರಣಗಳ ಸಹಾಯದಿಂದ ಸುಲಭವಾಗಿ ಕ್ಲಿಷ್ಠಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಹೇಳಿದರು.

ಸಮೀಪದ ತಡಕೋಡ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ 2024-25ನೇ ಸಾಲಿನ ಗಣಿತ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮೇಳಗಳು ವಿದ್ಯಾರ್ಥಿಗಳಿಗೆ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ, ಪೂರ್ಣಂಕಗಳ ಪರಿಕಲ್ಪನೆಗಳು, ಚಟುವಟಿಕೆಗಳ ಮೂಲಕ ಭಿನ್ನರಾಶಿಗಳು ಇತ್ಯಾದಿ ಒಳಗೊಂಡಂತೆ ಮೂಲಭೂತ ಕಾರ್ಯಾಚರಣೆ ಅರ್ಥ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ವಿ. ಸಂಶಿ ಮಾತನಾಡಿ, ಮೇಳದಲ್ಲಿ ನೈಜ ಗಣಿತ ಕಲಿತರೆ ಅದು ಸರಳವಾಗಿ ಅರ್ಥವಾಗುವುದರೊಂದಿಗೆ ಅಧಿಕ ಅಂಕ ಗಳಿಕೆಗೆ ಕಾರಣವಾಗುತ್ತದೆ ಎಂದರು.

ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಂ. ಕುರ್ಲಿ ಹಾಗೂ ಎಸ್​ಡಿಎಂಸಿ ಉಪಾಧ್ಯಕ್ಷೆ ಶ್ರೀದೇವಿ ಬೆಳವಡಿ ಮಾತನಾಡಿದರು.

ವಿದ್ಯಾರ್ಥಿಗಳು ಗಣಿತದ ಸೂತ್ರ, ಪ್ರಮೇಯ, ಆಕೃತಿ, ತ್ರಿಭುಜ ವಿವಿಧ ರೀತಿಯ ಕಲಾ ಪ್ರತಿಭೆಯನ್ನು ಮೇಳದಲ್ಲಿ ತೋರಿದರು. ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ವರ್ಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net