

ಹುನಗುಂದ:ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ಶಿಕ್ಷಕರು ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿದ ಶಿಕ್ಷಕರು ತಹಸೀಲ್ದಾರ ಕಚೇರಿ ಶಿರಸ್ತೇದಾರ ಶ್ರವಣಕುಮಾರ ಮುಂಡೇವಾಡಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸರ್ಕಾರಿ ನೌಕರಿ ಸಂದ ಅಧ್ಯ ಸಂಗಮೇಶ ಪಾಟೀಲ ಮಾತನಾಡಿ, ಸಾಮಾಜಿಕ ಹಾಗೂ ಶೈಣಿಕ ಸಮೀಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ತಾಂತ್ರಿಕೆ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಸುಲಭವಾಗಿ ಗಣತಿ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಜಿಯೋ ಟ್ಯಾಗ್ ಅಂಟಿಸಿದ ಮನೆಯ ಸಮೀೆ ಲೊಕೇಷನ್ ಮೂಲಕ ಸರ್ಚ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಕಳೆದ ಸಾಲಿನ ಪರಿಶಿಷ್ಟ ಜಾತಿಯ ಸಮಗ್ರ ಸಮೀೆಯಂತೆ ಶಿಕರಿಗೆ ನಿಗದಿಪಡಿಸಿದ ಮನೆಗಳ ಸಂಪೂರ್ಣ ವಿಳಾಸವನ್ನು ಸಂಬಂಧಿಸಿದ ಗಣತಿದಾರರಿಗೆ ನೀಡಬೇಕು. ಒಂದೇ ಸ್ಥಳದಲ್ಲಿ ಪ್ರದೇಶಗಳನ್ನು ಗುರುತಿಸಿ ನೀಡಬೇಕು. ಆದರೆ ಓರ್ವ ಗಣತಿದಾರರಿಗೆ 100 ಮನೆಗಳ ಗುರಿ ನೀಡಿ, ಬೇರೆ ಬೇರೆ ಪ್ರದೇಶವನ್ನು ಗುರುತಿಸಿದ್ದಾರೆ. ಇದರಿಂದ ಗಣತಿದಾರರು ಅಲೆದಾಡಿ ಸುಸ್ತಾಗಿ ಹೋಗಿದ್ದಾರೆ. ಕನಿಷ್ಠ 8 ರಿಂದ 10 ಕಿ.ಮೀ. ವ್ಯಾಪ್ತಿಯ ಪ್ರದೇಶ ಮನೆಗಳನ್ನು ಹಂಚಿಕೆ ಮಾಡಿದ್ದು, ಸಮೀಕ್ಷೆ ಸಕಾಲದಲ್ಲಿ ಪೂರ್ಣಗೊಳ್ಳಲು ಬಹಳಷ್ಟು ಸವಾಲು ಎದುರಾಗಿದೆ.
ಇನ್ನು 55 ವರ್ಷಕ್ಕಿಂತ ಮೇಲ್ಪಟ್ಟ ಶಿಕರಿಗೆ, ದೈಹಿಕ, ಅಂಗವಿಕಲ, ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಶಿಕರಿಗೆ ವಿನಾಯಿತಿ ನೀಡಬೇಕು. ಕೂಡಲೇ ಸರ್ಕಾರವು ಗಣತಿ ಕಾರ್ಯ ಸುಲಲಿತವಾಗಿ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಶಿಕರಾದ ಎಸ್.ಜಿ. ಹುದ್ದಾರ, ಎಂ.ಟಿ. ನಡುವಿನಮನಿ, ಎಂ.ಸಿ. ಮ್ಯಾಗೇರಿ, ಎಸ್.ಎಚ್. ಮೇಟಿ, ಬಸವರಾಜ ತೋಟಗೇರ, ಬಿ.ಎಚ್. ಕರಡಿ, ಶಿವು ದರಗಾದ, ಎ.ಎಂ. ಸುಂಕದ, ರಾಜು ಸುಂಕದ ಇದ್ದರು.
ಹುನಗುಂದ ಪಟ್ಟಣದಲ್ಲಿ ಶಿರಸ್ತೇದಾರ ಶ್ರವಣಕುಮಾರ ಮುಂಡೇವಾಡಿ ಅವರಿಗೆ ಶಿಕ್ಷಕರು ಮನವಿ ಸಲ್ಲಿಸಿದರು. ಶಿಕರಾದ ಎಸ್.ಜಿ. ಹುದ್ದಾರ, ಎಂ.ಟಿ. ನಡುವಿನಮನಿ, ಎಂ.ಸಿ. ಮ್ಯಾಗೇರಿ, ಎಸ್.ಎಚ್. ಮೇಟಿ ಇದ್ದರು.