ಬೆಳೆಗಾರರ ಸಮಸ್ಯೆ ಪರಿಹರಿಸಿ

24sri-2
Published on

ಶೃಂಗೇರಿ: ತಾಲೂಕಿನ ತೋಟಗಾರಿಕಾ ಬೆಳೆಗಾರ ವಿವಿಧ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ತೋಟಗಾರಿಕೆ ಬೆಳೆಗಾರರು ಸೋಮವಾರ ತಹಸೀಲ್ದಾರ್ ಅನುಪ್ ಸಂಜೋಗ್‌ಗೆ ಮನವಿ ಸಲ್ಲಿಸಿದರು.

ಕೃಷಿಕ ನಾಗನಂದ್ ಮಾತನಾಡಿ, ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳು ಸಂಪೂರ್ಣ ರೋಗ ಮತ್ತು ಕೀಟಗಳ ಹಾವಳಿಯಿಂದ ನಾಶವಾಗುತ್ತಿದೆ. ಇದರಿಂದ ಬೆಳೆಯಲ್ಲಿ ಇಳುವರಿ ಕಡಿಮೆಯಾಗುತ್ತಿದೆ. ರೈತರ ಅರ್ಥಿಕ ಸ್ಥಿತಿ ಹದಗೆಟ್ಟಿದೆ. ತೋಟಗಾರಿಕಾ ಇಲಾಖೆಗೆ ಹೆಚ್ಚು ಅನುದಾನ ನೀಡುವ ಮೂಲಕ ಸರ್ಕಾರ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಯುವ ಕೃಷಿಕ ಭರತ್‌ರಾಜ್ ಕೆರೆಮನೆ ಮಾತನಾಡಿ, ತಾಲೂಕಿನ ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಕಾಣುತ್ತಿದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಕೆಲಸ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸರ್ಕಾರ ಕೂಡಲೇ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು. ಕೃಷ್ಣಮೂರ್ತಿ,ಕೆ.ಡಿ.ಸುರೇಶ್, ತಿಮ್ಮ, ರಾಮಪ್ಪ, ಉಮೇಶ್, ರಮಾನಂದ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net