ದಾಕ್ಷಿ ಬೆಳೆಗಾರರ ಸಮಸ್ಯೆ ನಿವಾರಿಸಿ

Solve the problem of dakshi growers
Published on

ವಿಜಯಪುರ:ಜಿಲ್ಲೆಯ ದ್ರಾ ಬೆಳೆಗಾರರ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ನಂಬಿ 15&20 ಸಾವಿರ ರೈತ ಕುಟುಂಬಗಳು ಹಾಗೂ ಸಾವಿರಾರು ರೈತ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ.

ಆದರೆ, ಇತ್ತೀಚೆಗೆ ದಲ್ಲಾಳಿಗಳ ಹಾವಳಿ, ಮಾರುಕಟ್ಟೆ ಕೊರತೆ, ಕೋಲ್ಡ್​ ಸ್ಟೋರೇಜ್​ ಕೊರತೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಖರ್ಚು, ದಿನಗೂಲಿ ನೌಕರರ ಸಂಬಳ, ಔಷಧ, ಗೊಬ್ಬರಗಳ ಖರ್ಚು ಹತ್ತು ಪಟ್ಟು ಹೆಚ್ಚಾಗಿದೆ. ಅಲ್ಲದೆ, ಕೆಲವೊಮ್ಮೆ ರೋಗ ಹಾಗೂ ಸರಿಯಾದ ಬೆಲೆ ಸಿಗದೆ ದ್ರಾಕ್ಷಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ ಎಂದು ದೂರಿದರು.

ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಹಲವು ರೈತರ ಜಮೀನಿನಲ್ಲಿ ನೀರು ನಿಂತು ನಷ್ಟ ಅನುಭವಿಸಿದ್ದು, ಕೂಡಲೇ ವಿಮೆ ಕಂಪನಿ ಹಾಗೂ ಸರ್ಕಾರ ಪರಿಹಾರ ನೀಡಬೇಕು. ಅಲ್ಲದೆ, 2024&25ನೇ ಸಾಲಿನ ದ್ರಾ ಬೆಳೆ ವಿಮೆ ಅವಧಿ ಮುಗಿದರೂ ಇನ್ನುವರೆಗೂ ವಿಮೆ ಹಣ ಜಮೆ ಮಾಡಿಲ್ಲ. ಕೂಡಲೇ ವಿಮೆ ಹಣ ಜಮಾ ಮಾಡಬೇಕು. ದ್ರಾಗೆ ಸಂಬಂಧಿಸಿದ ವಿಮೆ ಕಂಪನಿಯ ಕಚೇರಿ ಜಿಲ್ಲೆಯಲ್ಲಿ ಸ್ಥಾಪಿಸುವವುದು ಸೇರಿ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಮುಖಂಡರಾದ ಜಕರಾಯ ಪೂಜಾರಿ, ಕನ್ನಪ್ಪ ಕೊಂಡಿ, ಈಶ್ವರ ಯಳಜೇರಿ, ಮಲ್ಲಪ್ಪ ಕೋಮಡಿ, ಕುಮಾರ ಚಡಚಣ, ಸದಾಶಿವ ಡಾಲಟ್ಟಿ, ರಾಮಚಂದ್ರ ಅಗಸರ, ಬಸಪ್ಪ ಮಾಳಿ, ಶಿವು ಪಟ್ಟಣಶೆಟ್ಟಿ, ಅಶೋಕ ಶಿರೋಳ, ಭೀಮು ತೋನಶೆಟ್ಟಿ, ಭೀಮು ಬಡಕುರಿ, ಅಮರ ಪೂಜಾರಿ, ಬೀರು ಗಡದಿ, ಬಾಲಿಸಾಬ ಮುಲ್ಲಾ, ಶಿವು ಮಾಳಿ ಮತ್ತಿತರರಿದ್ದರು.

ದ್ರಾ ಬೆಳೆಗಾರರ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ವಿಜಯಪುರದಲ್ಲಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂಗಮೇಶ ಸಗರ, ಜಕರಾಯ ಪೂಜಾರಿ, ಕನ್ನಪ್ಪ ಕೊಂಡಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net