ಕುಡಿವ ನೀರಿನ ಸಮಸ್ಯೆ ಪರಿಹರಿಸಿ

Published on

ಕವಿತಾಳ: ಪಟ್ಟಣದ 14ನೇ ವಾರ್ಡ್‌ನಲ್ಲಿ ತಲೆದೋರಿರುವ ಕುಡಿವ ನೀರಿನ ಸಮಸ್ಯೆ ನಿವಾರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ಪಪಂ ಮುಖ್ಯಾಧಿಕಾರಿ ಜಸ್‌ಪಾಲ್ ಸಿಂಗ್‌ಗೆ ಮನವಿ ಸಲ್ಲಿಸಿದರು.

ಜಲ ಸಮಸ್ಯೆಯಿಂದ ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಕೆಲವೆಡೆ ಚರಂಡಿಗಳು ತುಂಬಿ ರಸ್ತೆಗೆ ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ. ಈ ಕುರಿತು ಹಲವು ಸಲ ಮನವಿ ಮಾಡಿದರು ಕೂಡ ನಿರ್ಲಕ್ಷೃ ತೋರಲಾಗಿದೆ.

ಈಗಲಾದರೂ 14ನೇ ವಾರ್ಡ್ ಜನರ ಸಮಸ್ಯೆಗೆ ಸ್ಪಂದಿಸಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರುಉ. ಮುಖಂಡರಾದ ಅಮರೇಶ ಕೋಟೆ, ವೆಂಕಟೇಶ ಭೋವಿ, ಸಂಗಯ್ಯಸ್ವಾಮಿ, ರಮೇಶ ಭೋವಿ, ರಾಘವೇಂದ್ರ ಹಡಪದ, ರಮೇಶ ಬಡಿಗೇರ, ಕೃಷ್ಣಪ್ಪ ಭಜಂತ್ರಿ, ಈರಪ್ಪ ಸಾಹುಕಾರ, ರಾಮಣ್ಣ ಆದೋನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net