ಸಮಸ್ಯೆಗಳ ಪರಿಹಾರಕ್ಕೆ ಬೀದಿಗಿಳಿದ ರೈತರು

CTD 27 STRIKE-03
Published on

ಚಿತ್ರದುರ್ಗ: ಕಂದಾಯ, ಸರ್ವೇ, ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ರೈತರಿಗಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು, ಕೃಷಿಕರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಜಮೀನುಗಳಿಗೆ ಹೋಗಲು ದಾರಿ ಮಾಡಿಸಿಕೊಡಬೇಕು. ಪಹಣಿಗಳಲ್ಲಿರುವ ಲೋಪ ಸರಿಪಡಿಸಿ, ಸವಲತ್ತುಗಳನ್ನು ಪಡೆದುಕೊಳ್ಳಲು ಸಹಕಾರ ನೀಡಬೇಕು. ಇ-ಸ್ವತ್ತು ವಿತರಣೆ ವಿಳಂಬವನ್ನು ತಪ್ಪಿಸಬೇಕು. ಬೇಸಿಗೆ ಆರಂಭವಾಗುತ್ತಿರುವುದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಹತ್ತು ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಪಹಣಿ ಶುಲ್ಕವನ್ನು 10 ರೂ.ಗಳಿಂದ ಐದು ರೂ.ಗಳಿಗೆ ಇಳಿಸಬೇಕು. ರೈತರಿಗೆ ವಿತರಿಸುತ್ತಿರುವ ತುಂತುರು ನೀರಾವರಿ ಸೆಟ್‌ಗಳನ್ನು ಏಳು ವರ್ಷಗಳ ಬದಲು ಮೂರು ವರ್ಷಗಳಿಗೆ ಮಾರ್ಪಡಿಸಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಜಿಲ್ಲಾಧ್ಯಕ್ಷ ಎಚ್.ಬಸವರಾಜಪ್ಪ ಅಳಗವಾಡಿ, ಗೌರವಾಧ್ಯಕ್ಷ ಜಿ.ಎಸ್.ಶಿವಣ್ಣ ಕುರುಬರಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಪರಮೇಶ್ವರಪ್ಪ, ಕೋಶಾಧ್ಯಕ್ಷ ಗೌಡ್ರು ಪರಮಶಿವಣ್ಣ, ಖಾದರ್ ಬಾಷಾ, ಎಚ್.ಪ್ರಕಾಶ್, ಅಣ್ಣಪ್ಪಸ್ವಾಮಿ, ಹನುಮಂತರಾಯ, ನವೀನ್‌ಕುಮಾರ್, ಜಂಪಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net