ಪದವಿ ಪರೀಕ್ಷೆ ಗೊಂದಲ ಪರಿಹರಿಸಿ

14-03-Shiva-5
ಪದವಿ ಪರೀಕ್ಷೆ, ಅಂಕಪಟ್ಟಿ ಹಾಗೂ ಲಿತಾಂಶ ಬಿಡುಗಡೆಯಲ್ಲಿ ಆಗುತ್ತಿರುವ ಗೊಂದಲವನ್ನು ಪರಿಹರಿಸುವಂತೆ ಒತ್ತಾಯಿಸಿ ರಾಯಚೂರು ವಿವಿ ಕುಲಸಚಿವ ಪ್ರೊ.ಎಂ.ವಿಶ್ವನಾಥಗೆ ಎಐಡಿಎಸ್‌ಒದಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಹಯ್ಯಳಪ್ಪ, ಪದಾಕಾರಿಗಳಾದ ಬಸವರಾಜ, ಪೀರ್‌ಸಾಬ್, ನಿತೀನ್, ಸುರೇಶ, ಜ್ಯೋತಿ, ನರಸಮ್ಮ ಇದ್ದರು.
Published on

ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ, ಅಂಕಪಟ್ಟಿ ಮತ್ತು ಲಿತಾಂಶದಲ್ಲಿರುವ ಗೊಂದಲಗಳನ್ನು ಪರಿಹರಿಸುವಂತೆ ಎಐಡಿಎಸ್‌ಒ ಜಿಲ್ಲಾ ಘಟಕ ಒತ್ತಾಯಿಸಿದೆ.
ಸಂಘಟನೆ ನಿಯೋಗ ವಿವಿ ಕುಲಸಚಿವ ಪ್ರೊ.ಎಂ.ವಿಶ್ವನಾಥಗೆ ಗುರುವಾರ ಮನವಿ ಸಲ್ಲಿಸಿ, ವಿವಿ ಅಡಿಯಲ್ಲಿ ಬರುವ ಬಹುತೇಕ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪರೀಕ್ಷೆ, ಅಂಕಪಟ್ಟಿ ಹಾಗೂ ಲಿತಾಂಶಕ್ಕೆ ಸಂಬಂಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದೂರಿದರು.
ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಐದನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದರೂ ಇದುವರೆಗೂ ಹಿಂದಿನ ಯಾವುದೇ ಸೆಮಿಸ್ಟರ್ ಅಂಕಪಟ್ಟಿ ದೊರೆತಿಲ್ಲ. ಇತ್ತೀಚಿನ ಮೊದಲ ಮತ್ತು ಮೂರನೇ ಸೆಮಿಸ್ಟರ್ ಲಿತಾಂಶ ಬಿಡುಗಡೆ ನಂತರ ತಾಂತ್ರಿಕ ಸಮಸ್ಯೆಗಳಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಲಿತಾಂಶ ದೊರೆತಿಲ್ಲ.
ಸೆಮಿಸ್ಟರ್ ಪರೀಕ್ಷೆಗಳು ಹತ್ತಿರ ಬಂದರೂ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳು ದೊರೆತಿಲ್ಲ. ಈಗಲಾಗಲೇ ಶೈಕ್ಷಣಿಕ ವರ್ಷ ನಿಗದಿತ ಸಮಯಕ್ಕಿಂತ ಮುರ‌್ನಾಲ್ಕು ತಿಂಗಳು ಹಿಂದೆ ಉಳಿಸಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದರ ಜತೆಗೆ ಮುಂದೆ ಇಂತಹ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಹಯ್ಯಳಪ್ಪ, ಪದಾಕಾರಿಗಳಾದ ಬಸವರಾಜ, ಪೀರ್‌ಸಾಬ್, ನಿತೀನ್, ಸುರೇಶ, ಜ್ಯೋತಿ, ನರಸಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net