

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಎದುರಿನ ಈಶ್ವರನಗರ ಬಳಿಯ ಜೀವೋತ್ತಮ ಕಾಲನಿಗೆ ಮೂಲ ಸೌಭ್ಯಗಳನ್ನು ಒದಗಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಈ ಕುರಿತು ನವನಗರದ ವಲಯ ಕಚೇರಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿರುವ ನಿವಾಸಿಗಳು, ಕಾಲನಿಯಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲ. ಇದರಿಂದ ಕೊಳಚೆ ಮುಕ್ತವಾಗಿ ಹರಿಯುತ್ತದೆ. ಯುಜಿಡಿ ಸಂಪರ್ಕ ಸಮರ್ಪಕವಾಗಿಲ್ಲದ ಕಾರಣ ಕಾಲನಿಯ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಇದಲ್ಲದೇ ಕಾಲನಿಯಲ್ಲಿ ಸರಿಯಾಗಿ ಬೀದಿ ದೀಪದ ವ್ಯವಸ್ಥೆ ಇಲ್ಲ. ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ನಾಗರಿಕರಿಗೆ ನೆಮ್ಮದಿಯ ಬದುಕಿಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದಾರೆ.
ಕಾಲನಿ ನಿವಾಸಿಗಳಾದ ಜಗದೀಶ ರೋಣದ, ಚಂದ್ರಶೇಖರ ನೀಲಗುಂದ, ರಮೇಶ ಸನ್ನಾಯಕ,
ರಾಜು ಬೆಟಗೇರಿ, ಷಣ್ಮುಖ ಜಲಪುರಿ, ದಾಮೋದರ ಕಾಮತ್, ದಂಡಪ್ಪ ದಂಡಿನ, ಬಿ.ಡಿ. ರಾಮನಾಳ, ಸಿ.ಎಸ್. ಹಿರೇಮಠ, ಪಾರ್ವತಿ ಎಸ್., ಶಾರದಾ ಅರಳಿಕಟ್ಟಿ, ಮೀನಾ ಪೂಜಾರ, ಶಶಿಕಲಾ, ನೇತ್ರಾ ಪೂಜಾರ, ಇತರರು ಮನವಿ ಮಾಡಿದರು.