

ನೆಲಮಂಗಲ: ಇನ್ನೂರ ಇಪ್ಪತ್ತು ಕೆವಿ ಸಾಮಾರ್ಥ್ಯದ ವಿದ್ಯುತ್ ಉಪ ಕೇಂದ್ರ ನಿರ್ಮಾಣದಂತಹ ಮಹತ್ವದ ಯೋಜನೆಯಿಂದಾಗಿ ಮುಂದಿನ 25 ವರ್ಷಗಳ ಕಾಲ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತಲೆದೋರುವುದಿಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ೆ.19ರಂದು 220 ಕೆವಿ ವಿದ್ಯುತ್ ಉಪ ಕೇಂದ್ರದ ಭೂಮಿಪೂಜೆ ಹಿನ್ನೆಲೆಯಲ್ಲಿ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ನಿಂದ ಮಂಗಳವಾರ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
860 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಲೋಕಸಭೆ ಚುನಾವಣೆ ಕಾರಣದಿಂದಾಗಿ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ. ಆದರೆ ವಿರೋಧ ಪಕ್ಷದ ಮುಖಂಡರು, ಮಾಜಿ ಶಾಸಕರು ಕೇವಲ ಹೇಳಿಕೆಗಳಿಗಷ್ಟೆ ಕಾಮಗಾರಿಗಳು ಸೀಮಿತವಾಗಿವೆ. ಕಾಂಗ್ರೆಸ್ ಶಾಸಕರು ಯಾವುದೇ ಅನುದಾನ ತರದೆ ಸುಮ್ಮನೆ ಪೂಜೆ ಮಾಡುತ್ತಿದ್ದಾರೆ ಎಂಬ ಟೀಕೆ, ಟಿಪ್ಪಣಿಗಳ ಸರಮಾಲೆ ಸುರಿಸಿದ್ದರು. ಆ ಯಾವ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಾಗಿ ನುಡಿದಂತೆ ನಡೆದು ೇತ್ರದ ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.
ನಿರಂತರ ಸಂಪರ್ಕದಲ್ಲಿದ್ದು ಇಂಧನ ಸಚಿವರನ್ನು ಬೇಟಿ ಮಾಡಿ ೇತ್ರದಲ್ಲಿನ ವಿದ್ಯುತ್ ಸಮಸ್ಯೆಯ ಮನವರಿಕೆ ಮಾಡಿಕೊಡವುದರ ಜತೆಗೆ ಅವಶ್ಯಕ ಅನುದಾನ ಮಂಜೂರು ಮಾಡಿಸಿ ಕಡಿಮೆ ಅವಧಿಯಲ್ಲಿಯೇ ದಿನ ನಿಗದಿಪಡಿಸಿ ಭೂಮಿಪೂಜೆ ಮಾಡಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಇತಿಹಾಸದ ಪುಟಗಳಲ್ಲಿ ಸೇರಲಿದೆ. ಭವಿಷ್ಯದಲ್ಲಿ ೇತ್ರದ ಕೈಗಾರಿಕೆ, ವಾಣಿಜ್ಯ ಹಾಗೂ ಕೃಷಿಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ಸ್ಥಳಿಯ ಸಂಸ್ಥೆಗಳಿಂದ ಇ&ಆಸ್ತಿ ದಾಖಲೆ ಪಡೆಯಲು ಸಾರ್ವಜನಿಕರು ಅನುಭವಿಸುತ್ತಿದ್ದ ಕಷ್ಟಗಳನ್ನು ಮನಗಂಡ ಮುಖ್ಯಮಂತ್ರಿಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ್ ಸೇರಿ ಸಂಬಂದಪಟ್ಟ ಇಲಾಖೆಗಳ ಸಚಿವರು ಇತ್ತೀಚೆಗಷ್ಟೇ ಸುತ್ತೋಲೆ ಹೊರಡಿಸಿರುವುದು ಮಾದರಿ ಎನಿಸಿದೆ. ಆಂದೋಲನದ ರೀತಿಯಲ್ಲಿ ನಗರಸಭೆಯಲ್ಲಿ ಸಭೆ ಆಯೋಜಿಸಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಶ್ರೀವೇ ಅರ್ಜಿ ವಿಲೇವಾರಿ ಮಾಡಿಸುವ ಜವಾಬ್ದಾರಿಯನ್ನು ಸ್ವತ@ ತಾನೇ ಮುಂದೆ ನಿಂತು ಮಾಡುತ್ತೇವೆ ಎಂದು ಶಾಸಕರು ತಿಳಿಸಿದರು.
ನಗರಸಭೆ ಅದ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸದಸ್ಯ ಗಂಗಾಧರ್ರಾವ್, ಸಿ.ಪ್ರದಿಪ್, ಪುರುಷೋತ್ತಮ್, ನರಸಿಂಹಮೂರ್ತಿ, ಪದ್ಮನಾಬ್ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಶ್, ರಂಗಸ್ವಾಮಿ, ಟಿ.ನಾಗರಾಜು, ಎಸ್ಸಿ ಬ್ಲಾಕ್ ಅಧ್ಯಕ್ಷ ವೆಂಕಟೇಶ್, ಬಮುಲ್ ನಿರ್ದೇಶಕ ಭಾಸ್ಕರ್, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡ ಗೋವಿಂದರಾಜು, ಮಿಲ್ಟಿ$ಮೂರ್ತಿ, ಸಿ.ಎಂ.ಗೌಡ, ಕುಮಾರ್, ಶೈಲೇಂದ್ರ, ಮುನಿಯಪ್ಪ, ನಾರಾಯಣ್ರಾವ್, ರವಿಕುಮಾರ್, ಗಂಗಾಧರ್ ಉಪಸ್ಥಿತರಿದ್ದರು.
ಇಂದು ಸಚಿವರಿಂದ ಭೂಮಿ ಪೂಜೆ
ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯಲ್ಲಿ 220 ಕೆವಿ ವಿದ್ಯುತ್ ಉಪ ಕೇಂದ್ರದ ಭೂಮಿಪೂಜೆ ಕಾರ್ಯಕ್ರಮವನ್ನು ಫೆ.19ರಂದು 10:30ಕ್ಕೆ ಸಚಿವ ಕೆ.ಜೆ.ಜಾರ್ಚ್ ನೆರವೇರಿಸಲಿದ್ದಾರೆ. ನಂತರ ಕಾಮಗಾರಿ ಸ್ಥಳ ವೀಕ್ಷಣೆ ಮಾಡಲಿದ್ದಾರೆ. ವರ್ಷಾವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಮಾಹಿತಿ ನೀಡಿದರು.