ವನ್ಯ ಪ್ರಾಣಿಗಳ ಹಾವಳಿ ತಡೆಗೆ ಪರಿಹಾರ : ಶಾಸಕಿ ಭಾಗೀರಥಿ ಮುರುಳ್ಯ ಭರವಸೆ

New Project (2)
Published on

ಸುಳ್ಯ: ಆನೆ, ಇತರ ವನ್ಯ ಪ್ರಾಣಿಗಳ ದಾಳಿಯಿಂದ ಹಾನಿಗೊಳಗಾಗಿರುವ ಉಬರಡ್ಕ-ಮಿತ್ತೂರು-ಮರ್ಕಂಜ ಗ್ರಾಮದ ರೆಂಜಾಳದ ಕೃಷಿಕರು ಶಾಸಕಿ ಭಾಗೀರಥಿ ಮುರುಳ್ಯ, ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಉಬರಡ್ಕ ಸಿಎ ಬ್ಯಾಂಕ್ ಸಭಾಂಗಣ, ಮರ್ಕಂಜದ ರೆಂಜಾಳ ವಿನಾಯಕ ಸಭಾಭವನದಲ್ಲಿ ಸಂವಾದ ನಡೆಯಿತು.

ಹಲವು ಮಂದಿ ಕೃಷಿಕರು ತಮ್ಮ ಕೃಷಿ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳ, ಶಾಸಕರ ಗಮನಕ್ಕೆ ತಂದರು. ಸರ್ಕಾರದಿಂದ ಸಿಗುವ ಸವಲತ್ತು, ಪರಿಹಾರಗಳ ಬಗ್ಗೆ ಅಧಿಕಾರಿಗಳು ಮಾಹಿತಿ ತಿಳಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಈಗಾಗಲೇ ಮೂರು ಬಾರಿ ಅರಣ್ಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಸೋಲಾರ್ ಬೇಲಿ ನಿರ್ಮಾಣಕ್ಕೆ ಈಗ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಶೇ.90ಕ್ಕೆ ಏರಿಸಬೇಕು. ಹಾನಿಗೆ ಪರಿಹಾರ ಮೊತ್ತ ಹೆಚ್ಚಿಸುವಂತೆ, ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ನಮ್ಮ ಮನವಿಗೆ ಸಚಿವರು ಸ್ಪಂದಿಸುವ ಭರವಸೆ ಇದೆ ಎಂದರು.

ಸುಬ್ರಹ್ಮಣ್ಯ ಉಪವಿಭಾಗ ಎಸಿಎಫ್ ಪ್ರಶಾಂತ್‌ಕುಮಾರ್ ಪೈ, ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಉಬರಡ್ಕ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಸೂಂತೊಡು, ಉಪಾಧ್ಯಕ್ಷೆ ಚಿತ್ರಾ ಕುಮಾರಿ, ಸದಸ್ಯ ಪ್ರಶಾಂತ ಪಾನತ್ತಿಲ, ಸಿಎ ಬ್ಯಾಂಕ್ ಅಧ್ಯಕ್ಷ ದಾಮೋದರ ಮದುವೆಗದ್ದೆ, ಮರ್ಕಂಜ ಗ್ರಾಪಂ ಅಧ್ಯಕ್ಷೆ ಗೀತಾ, ಮಾಜಿ ಜಿಪಂ ಸದಸ್ಯ ಹರೀಶ ಕಂಜಿಪಿಲಿ, ಸಿಎ ಬ್ಯಾಂಕ್ ಸಿಒ ಜಯಪ್ರಕಾಶ ಉರುಂಡೆ, ಕೃಷಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net