ಸೋಲೂರು ನೆಲಮಂಗಲಕ್ಕೋ ಮಾಗಡಿಗೋ?

soluru
Published on

ಮತ್ತೊಂದು ಜಿಲ್ಲೆಗೆ ಸೇರ್ಪಡೆಗೆ ಜನರಿಂದ ವಿರೋಧ > ಜೆಡಿಎಸ್​& ಬಿಜೆಪಿ ಕಾರ್ಯಕರ್ತರಿಂದ ಹೋರಾಟ

ಮಾಗಡಿ: ಕೇಂದ್ರ ಸರ್ಕಾರದ ಡಿಲಿಮಿಟೇಶನ್​ ಕಮಿಷನ್​ ಹಾಗೂ ಚುನಾವಣಾ ಆಯೋಗದ ಅನುಮತಿ ಪಡೆಯದೇ ಸೋಲೂರು ಹೋಬಳಿಯನ್ನು ಮತ್ತೊಂದು ಜಿಲ್ಲೆಗೆ ಸೇರ್ಪಡೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಡಿಲಿಮಿಟೇಶನ್​ ನಿಯಮದಡಿ ಬರುವ ಹೋಬಳಿಯನ್ನು ಮತ್ತೊಂದು ಜಿಲ್ಲೆಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಹಾಗೂ ಚುನಾವಣಾ ಆಯೋಗದ ಅನುಮತಿ ಪಡೆಯಬೇಕು. ಆದರೆ, ತುರ್ತಾಗಿ ಸೋಲೂರನ್ನು ನೆಲಮಂಗಲಕ್ಕೆ ಸೇರಿಸಲು ಮುಂದಾಗಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

2025ರಲ್ಲಿ ಕೇಂದ್ರ ಸರ್ಕಾರ ಡಿಲಿಮಿಟೇಶನ್​ ಆಯೋಗ ರಚನೆ ಮಾಡುತ್ತಿದ್ದು, ಡಿಸೆಂಬರ್​ ವೇಳೆ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಡಿಲಿಮಿಟೇಶನ್​ ರಚನೆ ಮುನ್ನವೇ ನೆಲಮಂಗಲ ಶಾಸಕರು ಸೋಲೂರನ್ನು ಬೇರ್ಪಡೆಗೊಳಿಸುತ್ತಿರುವ ಹಿಂದೆ ಅವರ ಸ್ಥಾನ ಗಟ್ಟಿಮಾಡಿಕೊಳ್ಳುವ ಹುನ್ನಾರ ಅಡಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಇಂಥ ಸಾಕಷ್ಟು ವಿಚಾರಗಳನ್ನು ಪಟ್ಟಿಮಾಡಿಕೊಂಡು ವಕೀಲರು ಕಾನೂನು ಹೋರಾಟಕ್ಕೆ ಸಿದ್ಧತೆ ಕೈಗೊಂಡಿದ್ದಾರೆ.

ಶಾಸಕ ಎಚ್​.ಸಿ.ಬಾಲಕೃಷ್ಣ ಹಣಕ್ಕಾಗಿ ಸೋಲೂರು ಹೋಬಳಿಯನ್ನು ಬೇರೆ ಜಿಲ್ಲೆಗೆ ಮಾರಾಟಕ್ಕೆ ಇಟ್ಟಿದ್ದಾರೆಯೇ ಎಂದು ಜೆಡಿಎಸ್​&ಬಿಜೆಪಿ ಪಾಳಯದ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಭಾರತದ ಪ್ರವಾಸದಲ್ಲಿರುವ ಶಾಸಕ ಎಚ್​.ಸಿ.ಬಾಲಕೃಷ್ಣ ಅವರು ಸೋಲೂರು ಹೋಬಳಿಯ ಬಗ್ಗೆ ಯಾವುದೇ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳ ಮುಂದೆ ನೀಡದೆ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಜೆಡಿಎಸ್​& ಬಿಜೆಪಿ ಕಾರ್ಯಕರ್ತರು ಸೋಲೂರು ಹೋಬಳಿ ಉಳಿಸುತ್ತೀರೋ ಅಥವಾ ಮಾರಾಟ ಮಾಡುತ್ತಿರೋ ಎಂದು ೇತ್ರವ್ಯಾಪ್ತಿ ಪ್ರಚಾರ ಮಾಡುತ್ತಿದ್ದಾರೆ.

ಶ್ರೀನಿವಾಸ್​ಗೆ ಮುನ್ನಡೆಶಾಸಕ ಬಾಲಕೃಷ್ಣ 5 ಸಲ ಗೆದ್ದಿದ್ದಾರೆ, ನೆಲಮಂಗಲ ಶ್ರೀನಿವಾಸ್​ ಒಂದು ಬಾರಿ ಗೆದ್ದಿದ್ದಾರೆ. ಆದರೆ ಬಾಲಕೃಷ್ಣ ಅವರ ಕೈ ಮೇಲಾಗಲಿಲ್ಲ. ಬಾಲಕೃಷ್ಣ ಅವರ ಹಿಡಿತ ಸರ್ಕಾರದಲ್ಲಿ ಇಲ್ಲವೇ ಹಾಗೂ ಡಿಕೆ ಬ್ರದರ್ಸ್​ ಅವರ ಮಾತಿಗೆ ಬಾಲಕೃಷ್ಣ ತಲೆ ಅಲ್ಲಾಡಿಸುವ ವ್ಯಕ್ತಿಯಾಗುತ್ತಿದ್ದಾರೆ ಎಂಬ ಮಾತುಗಳು ೇತ್ರದಲ್ಲಿ ಚರ್ಚೆಯಾಗುತ್ತಿವೆ. ಇದರ ಮಧ್ಯೆ ಸೋಲೂರು ಹೋಬಳಿಯ ಮತದಾನದ ಹಕ್ಕನ್ನು ಮಾತ್ರ ತಾಲೂಕು ಮಾಗಡಿಗೆ ವರ್ಗಾಯಿಸಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರತಂತಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.ವಹಿವಾಟಿನ ಮೇಲೆ ಹೊಡೆತಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರುವುದು ಫಲಪ್ರದವಾದರೆ ಮಾಗಡಿ ತಾಲೂಕು ಕೇಂದ್ರದ ಆರ್ಥಿಕ ವಹಿವಾಟಿನ ಮೇಲೆ ಹೊಡೆತ ಬೀಳಲಿದೆ, ಡಿಡಿಪಿ ವರ್ಕರ್​, ಸೇವಾ ಸಿಂಧು ಕೇಂದ್ರಗಳು, ಬಸ್​ ಸೌಕರ್ಯ, ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಿಗೆ, ಇ&ಸ್ಟಾಂಪ್​ ಮತ್ತಿತರ ಕಾನೂನು, ಕಂದಾಯ ಇಲಾಖೆ ಇತರ ಇಲಾಖೆಯಡಿ ಬರುವ ಪೂರಕ ಸಣ್ಣ, ಪುಟ್ಟ ಉಪಕೇಂದ್ರಗಳು ಸಾರ್ವಜನಿಕರ ಕೊರತೆಯಾಗಿ ವಹಿವಾಟು ಕುಂಠಿತಗೊಳ್ಳಲಿದೆ.ಮಠದ ಭಕ್ತರಿಂದ ಆೇಪಸೋಲೂರು ಹೋಬಳಿಗೆ ಗದ್ದುಗೆಮಠ, ಚಿಲುಮೆಮಠ, ಜಗಣ್ಣಯ್ಯನ ಮಠ, ಕಂಚುಗಲ್ಲು ಬಂಡೇಮಠವಿದೆ. ಈ ಮಠಗಳಿಗೆ ಮಾಗಡಿ ಪಟ್ಟಣ, ಕುದೂರು, ಮಾಡಬಾಲ್​, ತಿಪ್ಪಸಂದ್ರ ಭಾಗಗಳ ಸಾವಿರಾರು ಭಕ್ತರಿದ್ದಾರೆ. ಈ ಎಲ್ಲ ಭಕ್ತರೂ ನಮ್ಮ ಮಠಗಳನ್ನು ನಮ್ಮ ತಾಲೂಕಿನಲ್ಲೆ ಉಳಿಸಿ ಎಂಬ ಅಪೇೆ ವ್ಯಕ್ತಪಡಿಸಿ ದೇವರಿಗೆ ಕೈಮುಗಿಯುತ್ತಿದ್ದಾರೆ. ಆದರೆ ಕೆಲ ಕಾಂಗ್ರೆಸ್​ ನಾಯಕರು ಮಠಾಧೀಶರ ಮೇಲೆ ಒತ್ತಡ ಹೇರಿ ನೆಲಮಂಗಲ ಸೇರ್ಪಡೆಯನ್ನು ಒಪ್ಪಿಕೊಳ್ಳಿ ಎಂದು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇತ್ತ ಮಠಾಧ್ಯಕ್ಷರು ಕೂಡ ಒಲ್ಲದ ಮನಸ್ಸಿನಿಂದ ತಟಸ್ಥರಾಗಿದ್ದಾರೆ.ವಿಧಾನಸೌಧಕ್ಕೆ ಮುತ್ತಿಗೆ ಮಾಗಡಿ ಪಟ್ಟಣದ ಕೆಂಪೇಗೌಡ ಪ್ರತಿಮೆ ಮುಂಭಾಗ ಬುಧವಾರ ಕನ್ನಡ ಸಂಟನೆ, ರೈತ ಸಂಟನೆಗಳ ಮುಖಂಡರು ಸಭೆ ನಡೆಸಿ ಸೋಲೂರನ್ನು ಮಾಗಡಿಗೆ ಸೇರಿಸಲು ಶಾಸಕ ಬಾಲಕೃಷ್ಣ ಮುಂದಾಗಬೇಕು. ಇದಕ್ಕೆ ಎಲ್ಲ ಸಹಕಾರ ನೀಡಲಾಗುವುದು. ಒಂದು ವೇಳೆ ಸೋಲೂರು ನೆಲಮಂಗಲಕ್ಕೆ ಸೇರ್ಪಡೆ ಮಾಡಿದರೆ ರಾಷ್ಟ್ರೀಯ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು. ಜತೆಗೆ, ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡಪರ, ರೈತಪರ ಸಂಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸಭೆಯಲ್ಲಿ ಗಾಯಕ ಕನ್ನಡ ಕುಮಾರು, ಕೆಂಪೇಗೌಡ ರೈತಸಂಟನೆ ಯುವ ರಾಜ್ಯಾಧ್ಯಕ್ಷ ಜುಟ್ನಹಳ್ಳಿ ಆರ್​.ದಿನೇಶ್​, ನಮ್ಮ ಕರ್ನಾಟಕ ನವನಿರ್ಮಾಣ ವೆದಿಕೆ ರಾಜ್ಯಾಧ್ಯಕ್ಷ ರಾಜಣ್ಣ, ಗೌರವಾಧ್ಯಕ್ಷ ಮಹಂತೇಶ್​, ಗೋ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವಕುಮಾರ ಕಲ್ಯಾ, ಚಿದಾನಂದ ಪಟೇಲ್​, ಸಿಡಿಗನಹಳ್ಳಿ ವೆಂಕಟೇಶ್​, ಹೊಸಪಾಳ್ಯ ಬಾಬು ಇತರರು ಇದ್ದರು.

ಸೋಲೂರು ಹೋಬಳಿ ಕೈ ಬಿಟ್ಟರೆ ಕೆಂಪೇಗೌಡರಿಗೆ ಮಾಡಿದ ಅವಮಾನವಾಗುತ್ತದೆ. ಸೋಲೂರು ಮಾಗಡಿ ತಾಲೂಕಿನಲ್ಲಿದ್ದರೆ ಗೌರವ ಹೆಚ್ಚು. ಇಲ್ಲಿಯ ಜನರಿಗೂ ಮಾಗಡಿ ಜನತೆಗೂ ಭಾವನಾತ್ಮಕವಾಗಿ ಸಂಬಂಧವಿದೆ. ಸೋಲೂರನ್ನು ಯಾವುದೇ ಕಾರಣಕ್ಕೂ ಬೇರ್ಪಡಿಸಲು ಬಿಡುವುದಿಲ್ಲ. ಈ ಬಗ್ಗೆ ಸಂಸದ ಡಾ.ಸಿ.ಎನ್​.ಮಂಜುನಾಥ್​ ಅವರ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಶ್ರೀದಲ್ಲೇ ವಿರೋಧ ಪಕ್ಷದ ನಾಯಕ ಆರ್​.ಆಶೋಕ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತಿರ್ಮಾನಿಸಲಾಗಿದೆ. > ವೀರಭದ್ರಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ, ಮಾಗಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net