

ಡಂಬಳ: ಕ್ರೀಡೆ ಮತ್ತು ಜೀವನದಲ್ಲಿ ಸೊಲು- ಗೆಲುವು ಸಹಜ. ಗೆದ್ದಾಗ ಬೀಗಬಾರದು, ಸೊತಾಗ ಕುಗ್ಗಬಾರದು ಎಂದು ಸಿಪಿಐ ಮಂಜುನಾಥ ಕುಸುಗಲ್ ಹೇಳಿದರು.
ಸಮೀಪದ ಬರದೂರ ಗ್ರಾಮದ ಸರ್ಕಾರಿ ವ್ಯವಸಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮೇವುಂಡಿ ಗ್ರುಪ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳು ಮನುಷ್ಯನ ದೇಹವನ್ನು ಗಟ್ಟಿಗೊಳಿಸಿ ಕ್ರಿಯಾಶೀಲರನ್ನಾಗಿಸುತ್ತದೆ. ಸೊಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಮುಖ್ಯೋಪಾಧ್ಯಾಯ ವಿಶ್ವನಾಥ ಉಳ್ಳಾಗಡ್ಡಿ ಸ್ವಾಗತಿಸಿದರು, ಶಿಕ್ಷಕ ಸುರೇಶ ಅಡರಕಟ್ಟಿ ನಿರೂಪಿಸಿದರು. ತಹಸೀಲ್ದಾರ್ ಧನಂಜಯ ಮಾಲಗಿತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ, ಎಸ್‌ಡಿಎಂಸಿ ಅಧ್ಯಕ್ಷೆ ಶೈಜಾಜಬೇಗಂ ಮಾಳೆಕೊಪ್ಪ, ಗ್ರಾಪಂ ಅಧ್ಯಕ್ಷೆ ದುರಗವ್ವ ತಳಗೇರಿ, ಸಿಆರ್‌ಪಿ ಎನ್.ಎಂ. ಕುಕನೂರ, ಗ್ರಾಪಂ ಸದಸ್ಯ ಬಸವರಾಜ ಬಾರಕೇರ, ಸರದಾರ ಮಾಳೆಕೊಪ್ಪ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಪ್ರಕಾಶ ಸಜ್ಜನರ, ಶಿವಪುತ್ರಪ್ಪ ಹಳ್ಳಿಕೇರಿ, ಮಲ್ಲಪ್ಪ ಗೌರಿಪೂರ, ಮಾರುತೇಶ ಮ್ಯಾಗೇರಿ, ಕೆಂಚನಗೌಡ್ರ ಹಿರೇಗೌಡ್ರ, ಈರಣ್ಣ ಹಡಪದ, ಶರಣಪ್ಪ ಕಂಬಳಿ, ಪರಶುರಾಮ ಭಜಂತ್ರಿ, ಈರಣ್ಣ ಶಿರೂರ, ಮುಕ್ತುಮಸಾಬ ಅತ್ತಾರ ಇತರರಿದ್ದರು.