ಸೋಲೋಮನ್, ಸೌಮ್ಯಾ, ವಸುಂಧರಾ ಪ್ರಥಮ

sjmvs today
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಎಸ್​ಜೆಎಂವಿ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಸೋಮವಾರ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಏರ್ಪಡಿಸಲಾಗಿತ್ತು.

ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪುಸ್ತಕ ಓದುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಮಹಿಳಾ ವಿದ್ಯಾಪೀಠ ಪದವಿ ಪೂರ್ವ ಕಾಲೇಜು, ಫಾತಿಮಾ ಪದವಿ ಪೂರ್ವ ಕಾಲೇಜು, ಶ್ರೀ ಜಗದ್ಗುರು ಮೂರುಸಾವಿರಮಠ ಪದವಿ ಪೂರ್ವ ಕಾಲೇಜ್ ಮತ್ತು ಎಸ್​ಜೆಎಂವಿ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಂಗ್ಲಿಷ್ ಭಾಷೆಯಲ್ಲಿ ಸೋಲೋಮನ್ ಪೀಟರ್ ಪ್ರಥಮ, ನಂದಿತಾ ಎನ್.ಎಸ್. ದ್ವಿತೀಯ, ಸೀಮಾ ಹಾವೇರಿ ತೃತೀಯ, ಕನ್ನಡ ಭಾಷೆಯಲ್ಲಿ ಸೌಮ್ಯಾ ಮಣ್ಣೂರು ಪ್ರಥಮ, ಲಕ್ಷ್ಮೀ ವಕ್ಕುಡಿ ದ್ವಿತೀಯ, ಪ್ರಿಯಾಂಕಾ ಮಲ್ಲದ ತೃತೀಯ, ಹಿಂದಿ ಭಾಷೆಯಲ್ಲಿ ವಸುಂಧರಾ ವೈಷ್ಣವ ಪ್ರಥಮ, ವರ್ಷಾ ಜೈನ ದ್ವಿತೀಯ ಹಾಗೂ ರಜಿಯಾ ಬಾನು ತೃತೀಯ ಬಹುಮಾನ ಪಡೆದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಗ್ರಂಥಪಾಲಕ ಸಂಗಮೇಶ ಪಾಶ್ಚಾಪೂರ ಪಾಲ್ಗೊಂಡಿದ್ದರು. ಪ್ರಾಚಾರ್ಯು ಡಾ. ಸಿಸಿಲಿಯಾ ಡಿಕ್ರೂಜ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಶಿವಕುಮಾರ ಬನ್ನಿಹಟ್ಟಿ, ಪ್ರೊ. ಶಿವಕುಮಾರ ಪಿ., ಪ್ರೊ. ಗುರುರಾಜ ನವಲಗುಂದ, ಗ್ರಂಥಪಾಲಕಿ ನೀಲಮ್ಮ ಡೋಣಗನವರ, ಹಳೇ ವಿದ್ಯಾರ್ಥಿ ಸಂಘದ ಮುಖ್ಯಸ್ಥೆ ಡಾ. ಸುನೀತಾರಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net