ಬೈಕ್‌ನಲ್ಲಿ ಏಕಾಂಗಿಯಾಗಿ 22 ಸಾವಿರ ಕಿ.ಮೀ. ತಿರಂಗಾ ಯಾತ್ರೆ ಮಾಡಿದ ಅಮೃತಾ ಜೋಷಿ

IMG-20220810-WA0003
Published on

ಮಂಗಳೂರು: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸವಿನೆನಪಿಗಾಗಿ 3 ತಿಂಗಳು ಏಕಾಂಗಿಯಾಗಿ 22 ಸಾವಿರ ಕಿ.ಮೀ. ತಿರಂಗಾ ಯಾತ್ರೆ ಮಾಡಿದ ಕಾಸರಗೋಡು ಮೂಲದ, ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೇ ವಿದ್ಯಾರ್ಥಿನಿ ಅಮೃತಾ ಜೋಷಿ ಬುಧವಾರ ಮಂಗಳೂರಿಗೆ ಆಗಮಿಸಿದರು.
ಮಂಗಳೂರಿನ ಡೊಂಗರಕೇರಿ ಕೆನರಾ ಹೈಸ್ಕೂಲ್‌ನಲ್ಲಿ ಆಡಳಿತ ಮಂಡಳಿಯಿಂದ ಅವರನ್ನು ಸ್ವಾಗತಿಸಿ ಅಭಿನಂದಿಸಲಾಯಿತು. ಬರ್ಮಾ, ಬಾಂಗ್ಲಾ, ನೇಪಾಳದ ಗಡಿಯಲ್ಲಿಯೂ ಸಂಚರಿಸಿ ಅಲ್ಲಿ ಭಾರತೀಯ ಸೈನಿಕರ ಸವಾಲಿನ ಪರಿಸ್ಥಿತಿಯನ್ನು ಕೂಡ ಕಣ್ಣಾರೆ ಕಂಡು ಬಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಲವು ಸವಾಲುಗಳ ನಡುವೆ ಯಶಸ್ವಿಯಾಗಿ ಮುಗಿಸಿದೆ. ಕೇರಳಕ್ಕೆ ತೆರಳಿ ಅಲ್ಲಿ ಯಾತ್ರೆಯನ್ನು ಸಂಪನ್ನಗೊಳಿಸಲಿದ್ದೇನೆ ಎಂದರು.
ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ರಂಗನಾಥ ಭಟ್‌, ಜತೆ ಕಾರ್ಯದರ್ಶಿ ಸುರೇಶ್‌ ಕಾಮತ್‌, ಕೆನರಾ ಹೈಸ್ಕೂಲ್‌ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ, ಆಡಳಿತ ಮಂಡಳಿ ಸದಸ್ಯ ನರೇಶ್‌ ಶೆಣೈ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net