ಸಹಕಾರ ಸಂಘಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯ

15arsph1ep
ಕಲ್ಲುಸಾದರಹಳ್ಳಿ ಹಾಗೂ ದೋಣನಕಟ್ಟೆ ಪಿಎಸಿಸಿಗಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲೋಕೇಶ್ ಹಾಗೂ ಜಯಪ್ರಕಾಶ್ ಅವರನ್ನು ಎಚ್.ಡಿ.ರೇವಣ್ಣ ಸನ್ಮಾನಿಸಿದರು. ಕೆ.ಎಸ್.ಚಂದ್ರಶೇಖರ್, ಜಯಣ್ಣ, ಲೋಕೇಶ್, ಪರಮೇಶ್ ಇತರರು ಇದ್ದರು.
Published on

ಅರಸೀಕೆರೆ: ಗ್ರಾಮೀಣ ಜನರ ಜೀವನಾಡಿಯಂತಿರುವ ಸಹಕಾರ ಸಂಘಗಳ ಅಭ್ಯುದಯಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲಹೆ ನೀಡಿದರು.


ತಾಲೂಕಿನ ಕಲ್ಲುಸಾದರಹಳ್ಳಿ, ದೋಣನಕಟ್ಟೆ ಪಿಎಸಿಸಿಗಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲೋಕೇಶ್ ಹಾಗೂ ಜಯಪ್ರಕಾಶ್ ಅವರನ್ನು ಗುರುವಾರ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸನ್ಮಾನಿಸಿ ಮಾತನಾಡಿದರು.


ಕೃಷಿ ಕ್ಷೇತ್ರದಲ್ಲಿ ರೈತರು ಸದೃಢರಾಗಲಿ ಎನ್ನುವ ಉದ್ದೇಶದಿಂದ ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ರಸಗೊಬ್ಬರ ವಿತರಣೆ, ಚಿನ್ನಾಭರಣಗಳ ಮೇಲೆ ಸಾಲ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಸಹಕಾರ ಬ್ಯಾಂಕ್ ವತಿಯಿಂದ ನೀಡಲಾಗುತ್ತಿದೆ. ಸಹಕಾರ ಸಂಘದಲ್ಲಿ ಹೊಣೆಗಾರಿಕೆ ಹೊತ್ತವರು ರೈತರ ಅಭಿವೃದ್ಧಿಗೆ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಮುಖಂಡರಾದ ಬಾಣಾವರ ಅಶೋಕ್, ಕುಡುಕುಂದಿ ಕುಮಾರ್, ಜಯಣ್ಣ, ಲೋಕೇಶ್, ಪರಮೇಶ್, ರಾಜಣ್ಣ, ಕರಿಯಪ್ಪ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net