

ಚಿಕ್ಕಬಳ್ಳಾಪುರ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪರಸ್ಪರ ಟೀಕೆಗಳಲ್ಲಿ ತೊಡಗಿದ್ದ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಹಾಗೂ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಸ್ವಸಮುದಾಯದ ಕಾರ್ಯಕ್ರಮದಲ್ಲಿ ಬಾಂಧವ್ಯದ ಚರ್ಚೆಯ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ಯುವ ಬಲಿಜ ಶಕ್ತಿ ನೇತೃತ್ವದಲ್ಲಿ ಕೈಗೊಂಡಿದ್ದ ಕೃಷ್ಣದೇವರಾಯ ರಥಯಾತ್ರೆಯ ರ್ಯಾಲಿಯಲ್ಲಿ ಇಬ್ಬರು ಜಂಟಿಯಾಗಿ ಸಾಗಿದರು. ಜೈಕಾರದ ಘೋಷಣೆಗಳಲ್ಲಿ ತೊಡಗಿದ್ದ ಪರಸ್ಪರ ಅಭಿಮಾನಿಗಳನ್ನು ಹುರಿದುಂಬಿಸಿದರು.
ಇದಕ್ಕೂ ಮೊದಲು ಇಲ್ಲಿನ ಕೈವಾರ ತಾತಯ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಎಂ.ಜಿ.ರಸ್ತೆ, ಬಿ.ಬಿ.ರಸ್ತೆಯ ಮೂಲಕ ರಥವು ಬೆಂಗಳೂರಿನತ್ತ ಸಾಗಿತು.
ಈ ಸಂದರ್ಭದಲ್ಲಿ ಬಲಿಜ ಮುಖಂಡರಾದ ಕೆ.ವಿ.ಮಂಜುನಾಥ್, ಶ್ರೀನಿವಾಸ್, ಆನಂದ್ ಅನು, ಡ್ಯಾನ್ಸ್ ಶ್ರೀನಿವಾಸ್, ರಾಮಚಂದ್ರಪ್ಪ, ವೆಂಕಟೇಶ್ ಮೂರ್ತಿ, ಎಸ್.ಪಿ.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.