ಸೈನಿಕರ ಕಾರ್ಯ ಸ್ಮರಣೀಯ

27BLH1
ಕಾರ್ಗಿಲ್ ವಿಜಯ ದಿನವನ್ನು ಗಣ್ಯರು ಉದ್ಘಾಟಿಸಿದರು. ವಿಜಯ ಮೆಟಗುಡ್ಡ, ಶಂಕರ ಮಾಡಲಗಿ ಇತರರಿದ್ದರು.
Published on

ಬೈಲಹೊಂಗಲ: ದೇಶದ ಜನರನ್ನು ರಕ್ಷಿಸುವ ಸೈನಿಕರ ಕಾರ್ಯ ದೊಡ್ಡದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಮಲಪ್ರಭಾ ಗ್ರಾಮೀಣಾಭಿವದ್ಧಿ ಸಂಸ್ಥೆ ಹಾಗೂ ಗಣಾಚಾರಿ ಶಿಕ್ಷಣ ಸಂಸ್ಥೆಯ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಉದ್ಘಾಟಿಸಿ ಮಾತನಾಡಿದರು.

ವಕೀಲ ಎ್.ಎಸ್. ಸಿದ್ದನಗೌಡರ, ಮಾಜಿ ಸೈನಿಕ ರಾಜಕುಮಾರ ಸವಟಗಿ, ಅಧ್ಯಕ್ಷತೆ ವಹಿಸಿದ್ದ ಡಾ.ಸಿ.ಬಿ.ಗಣಾಚಾರಿ ಮಾತನಾಡಿದರು. ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ಸೈನಿಕರು ಹಾಗೂ ಹುತಾತ್ಮ ಮಹಾದೇವ ಹಡಪದ ಪತ್ನಿ ಮಹಾದೇವಿ ಅವರನ್ನು ಸತ್ಕರಿಸಲಾಯಿತು. ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಂದ್ರಶೇಖರ ನೇಸರಗಿ, ಮಹಾದೇವ ಮಡಿವಾಳರ, ಸುರೇಶ ಕಂಬಾರ, ರತ್ನಾ ಗೋಧಿ, ಮಲ್ಲವ್ವ ಕಾಡನ್ನವರ, ಉದ್ಯಮಿ ವಿಜಯ ಮೆಟಗುಡ್ಡ, ಮಾಜಿ ಸೈನಿಕರಾದ ಮಂಜುನಾಥ ಬಾಗೇವಾಡಿ, ಯಲ್ಲಪ್ಪ ಗಡದ, ಮಹಾಂತೇಶ ಕಮತ, ದೇಮಪ್ಪ ಶಿರಗಾಂವಿ, ಟಿ.ಬಿ. ಮಾವಿನಕಟ್ಟಿ, ಬಿ.ಎಸ್.ಹೊಂಗಲ, ಎಸ್.ಜಿ.ಹಡಪದ, ಶಂಕರ ಬೇವಿನ, ಬಸವರಾಜ ಗುರನ್ನವರ, ಮಹಾಂತೇಶ ಕುಸಲಾಪೂರ, ಸಿದ್ದಾರೂಢ ಹೊಂಡಪ್ಪನವರ, ಗೌಡಪ್ಪ ಹೊಸಮನಿ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net