

ಬೆಲಹೊಂಗಲ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಮೆಗೂಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಐಕ್ಯಸ್ಥಳದಲ್ಲಿ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ, ಎಬಿವಿಪಿ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿರಂಗಾ ರಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಲು ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳೇ ನಮ್ಮ ಜೀವನಕ್ಕೆ ಸ್ಫೂರ್ತಿಯಾಗಿವೆ. ಸಹಸ್ರಾರು ದೇಶ ಪ್ರೇಮಿಗಳು ಅಹಿಂಸೆ, ತ್ಯಾಗ, ಬಲಿದಾನ ಹಾಗೂ ಬೆವರಿನ ಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಎಂದರು.
ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯ ರಾಜು ಸೊಗಲ, ಉಪಾಧ್ಯ ಸೋಮನಾಥ ಸೊಪ್ಪಿಮಠ, ಎಬಿವಿಪಿ ರಾಜ್ಯ ವಿದ್ಯಾರ್ಥಿ ಪ್ರಮುಖ ಅಪ್ಪಣ್ಣ ಹಡಪದ ಮಾತನಾಡಿ, ದೇಶಕ್ಕಾಗಿ ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಎಂದರು.
ಇದೇ ವೇಳೆ ಗಣಾಚಾರಿ ಶಿಣ ಸಂಸ್ಥೆಯ ನೂರಾರು ವಿದ್ಯಾರ್ಥಿಗಳಿಂದ 250 ಮೀಟರ್ ಉದ್ದಳತೆಯ ಭಾರತ ದೇಶದ ಧ್ವಜದ ಬಹತ್ ತಿರಂಗಾ ರಾಲಿಯು ಕಣ್ಮನ ಸೆಳೆಯಿತು ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ರಾಜು ಕುಡಸೋಮಣ್ಣವರ, ಮಡಿವಾಳಪ್ಪ ಹೋಟಿ, ಶ್ರೀಶೆಲ ಯಡಳ್ಳಿ, ಶಿವಾನಂದ ಬಡ್ಡಿಮನಿ, ಡಾ.ರಾಜು ಬಡ್ಲಿ, ನಾಗೇಶ ಯಕ್ಕುಂಡಿ, ಡಾ.ಸಾಗರ ಕುಲಕರ್ಣಿ, ರೋಹಿತ ಬಳಿಗೇರ, ಸಿದ್ಧಾರೂಢ ಹೊಂಡಪ್ಪನವರ, ಅಶೋಕ ಸವದತ್ತಿ, ಎಬಿವಿಪಿ ಪ್ರಮುಖರಾದ, ಅಭಿಷೇಕ ವನಜಾರಿ, ಶಾಂಭವಿ ಪಾಟೀಲ, ಕವಿತಾ ದೇವಲಾಪುರ, ಮಲ್ಲಿಕಾರ್ಜುನ ನವಲಗುಂದ, ಅತಾ ನಯಾನಗರ, ರೋಹಿತ ಬಳಿಗಾರ ಹಾಗೂ ಗಣಾಚಾರಿ ಶಿಣ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.