ಸೈನಿಕ, ಅನ್ನದಾತ ನಾಡಿನ ಪ್ರಭುಗಳು

SWAMIJI
ನರಗುಂದ ತಾಲೂಕಿನ ಭೈರನಹಟ್ಟಿ ವಿರಕ್ತಮಠದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಸಾದ ನೀಲಯದಲ್ಲಿ ಕಲಿಯುತ್ತಿರುವ ಮಕ್ಕಳಗೆ ಬಟ್ಟೆ ವಿತರಿಸಲಾಯಿತು. ಶಾಂತಲಿಂಗ ಸ್ವಾಮೀಜಿ, ಶೇಖಪ್ಪ ತಿಗಡಿ, ಬಾಬು ಅಜ್ಜ ಜಮಾದಾರ, ಶಿವಾನಂದ ಶೇಬಣ್ಣವರ, ಚನಬಸಪ್ಪ ಕೀಲಿಕೈ ಇತರರಿದ್ದರು.
Published on

ನರಗುಂದ: ಆತ್ಮ ಕಲ್ಯಾಣ, ಸಮಾಜ ಕಲ್ಯಾಣ ಸ್ವಾಮಿಗಳ ನಿರಂತರ ಸೇವೆಯಾಗಬೇಕು. ಲೋಕದಲ್ಲಿ ಶಾಂತಿ ವಾತಾವರಣ ನಿರ್ಮಿಸಲು ಸ್ವಾಮೀಜಿಗಳು ಸದಾ ಶ್ರಮಿಸಬೇಕು ಎಂದು ಭೈರನಹಟ್ಟಿ ಮಠದ ಪೀಠಾಧಿಪತಿ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಶಾಂತಲಿಂಗ ಸ್ವಾಮೀಜಿಯವರು ಲೋಕಕಲ್ಯಾಣಕ್ಕಾಗಿ ಒಂದು ತಿಂಗಳ ಪರ್ಯಂತ ಕೈಗೊಂಡ ಮೌನಾನುಷ್ಟಾನ ಮಂಗಲೋತ್ಸವ ಹಾಗೂ ವೀರಯೋಧರ ಯಶೋಗಾಥೆ ಕುರಿತು ಶ್ರೀಮಠದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನುಷ್ಟಾನವೆಂದರೆ ಉತ್ತಮ ಕೆಲಸಗಳನ್ನು ಕಾರ್ಯರೂಪಕ್ಕೆ ತರುವುದಾಗಿದೆ. ದೇಶ ಕಾಯುವ ಸಿಪಾಯಿ ಮತ್ತು ನಾಡಿಗೆ ಅನ್ನ ನೀಡುವ ರೈತರು ಈ ನಾಡಿನ ಮುಖ್ಯ ಪ್ರಭುಗಳು. ಅವರ ತ್ಯಾಗ ಮತ್ತು ಶ್ರಮ ಈ ದೇಶಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದರು.

ಮಾಜಿ ಯೋಧ ಜಿ.ಬಿ. ಕಂಠೆಣ್ಣವರ ಮಾತನಾಡಿ, ಚೀನಾ ಮತ್ತು ಪಾಕಿಸ್ತಾನದ ಜತೆಗೆ ಎರಡು ಘೋರ ಯುದ್ದಗಳು ನಡೆದಿವೆ. 1999ರಲ್ಲಿ 74 ದಿನಗಳವರೆಗೆ ಪಾಕಿಸ್ತಾನದೊಂದಿಗೆ ಯುದ್ಧ ನಡೆಯಿತು. ಇದು ಭಾರತದ ಕಾರ್ಗಿಲ್ ವಿಜಯೋತ್ಸವವೂ ಆಯಿತು. ಭಾರತದ 20 ಸಾವಿರ ಸೈನಿಕರು ಇದರಲ್ಲಿ ಭಾಗಿಯಾದರು. ಇದರಲ್ಲಿ 557 ಸೈನಿಕರು ವೀರಮರಣವನ್ನಪ್ಪಿದರು. 1300 ಯೋಧರು ಅಂಗವಿಕಲರಾದರು ಆ ಘಟನೆ ಇಂದಿಗೂ ಭಾರತೀಯರಲ್ಲಿ ಸ್ಮರಣೀಯ ದಿನವಾಗಿದೆ ಎಂದರು.

ನಿವೃತ್ತ ಶಿಕ್ಷಕ ಎಸ್.ಬಿ. ದಂಡಿನ ಮಾತನಾಡಿದರು. ನಿವೃತ್ತ ಅಧಿಕಾರಿ ವಿ.ಜಿ. ಐನಾಪೂರ ಶ್ರೀಮಠದ ವಿದ್ಯಾರ್ಥಿ ನಿಲಯದಲ್ಲಿ ಕಲಿಯುವ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಿದರು. ಎನ್.ಆರ್. ಮಣ್ಣೇರಿ 1 ಲಕ್ಷ ರೂ. ಕಾಣಿಕೆ ಸಮರ್ಪಿಸಿದರು. ಹುಣಸೀಕಟ್ಟಿ ಗ್ರಾಮದ ಈಶ್ವರಯ್ಯ ಹಿರೇಮಠ ಶಾಂತಲಿಂಗ ಶ್ರೀಗಳಿಗೆ ಬೆಳ್ಳಿ ಕಿರೀಟ ನೀಡಿದರು. ಶ್ರೀಮಠಕ್ಕೆ ತರಕಾರಿಗಳನ್ನು ಉಚಿತವಾಗಿ ನೀಡುವ ಕೊಣ್ಣೂರಿನ ಅಲ್ಲಾಬಾಯಿ ಹಾಗೂ ಹಸನ್‌ಸಾಬ ಸನ್ನಿಯವರನ್ನು ಮತ್ತು ವಿವಿಧ ಭಕ್ತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಶೇಖಪ್ಪ ತಿಗಡಿ, ಬಾಬು ಅಜ್ಜ ಜಮಾದಾರ, ಶಿವಾನಂದ ಶೇಬಣ್ಣವರ, ಚನಬಸಪ್ಪ ಕೀಲಿಕೈ, ಕೆ.ಡಿ. ಬಿಜಾಪೂರ, ಈರಪ್ಪ ಐನಾಪೂರ, ಬಸಯ್ಯ ಹಿರೇಮಠ, ಬಸಪ್ಪ ಐನಾಪೂರ, ಬಿ.ಬಿ. ಐನಾಪೂರ ಇತರರಿದ್ದರು. ಆರ್.ಬಿ. ಚಿನಿವಾಲರ, ರಮೇಶ ಐನಾಪೂರ, ಮಹಂತೇಶ ಹಿರೇಮಠ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net