ಯೋಧ ಮಹಾಂತೇಶ ಅಂತ್ಯಕ್ರಿಯೆ

10nsg1a
Published on

ನೇಸರಗಿ: ಪಶ್ಚಿಮ ಬಂಗಾಳದ ದುರ್ಗಾಪುರ ಜಿಲ್ಲೆಯ ಪಾನಾಗಡ್​ ಸಿಎಂಪಿ ರೆಜಿಮೆಂಟ್​ 59 ರಲ್ಲಿ ಸೋಮವಾರ ಕರ್ತವ್ಯನಿರತರಾಗಿದ್ದ ವೇಳೆ ಹದಯಾಘಾತದಿಂದ ನಿಧನರಾಗಿದ್ದ ಮೊಹರೆ ಗ್ರಾಮದ ಯೋಧ ಮಹಾಂತೇಶ ಚಂದ್ರಪ್ಪ ಪಾಟೀಲ (40) ಅವರ ಅಂತ್ಯಕ್ರಿಯೆ ಬುಧವಾರ ನೆರವೇರಿತು.

ಪಾರ್ಥೀವ ಶರೀರ ಬೆಂಗಳೂರ ಮೂಲಕ ಬುಧವಾರ ಬೆಳಗ್ಗೆ 8 ಗಂಟೆಗೆ ಮೊಹರೆ ಗ್ರಾಮ ತಲುಪಿದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಯಘೋಷಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಯೋಧನ ತಾಯಿ ಮಹಾದೇವಿ, ಪತ್ನಿ ಸುಪ್ರಿಯಾ, ಮಕ್ಕಳಾದ ಚಿರನ್ಯಾ, ಶ್ರೇಯಾ, ತ್ರಿಶಾ ನಮನ ಸಲ್ಲಿಸಿದರು.

ನೇಸರಗಿ ಠಾಣೆ ಪಿಎಸ್​ಐ ಈರಣ್ಣ ರಿತ್ತಿ, ಕಂದಾಯ ನಿರೀಕ ಜಗದೀಶ ಚೂರಿ, ಗ್ರಾಮ ಆಡಳಿತ ಅಧಿಕಾರಿ ರಮೇಶ ಶೀಗಿಹಳ್ಳಿ, ದೇಶನೂರ ಪಿಡಿಒ ಎಂ.ಎನ್​.ಬೋರಡ್ಡಿ, ಗ್ರಾಪಂ ಸದಸ್ಯ ಅಬ್ಬಾಸ್​ ಪೀರಜಾದೆ, ದೊಡ್ಡಪ್ಪ ತಳವಾರ, ಶಿಕ ರಾಜಶೇಖರ ಗೆಜ್ಜಿ, ಶಿವನಗೌಡ ಪಾಟೀಲ, ಮಾಜಿ ಸೆನಿಕರ ಸಂದ ಅಧ್ಯ ಸಣ್ಣಯಲ್ಲಪ್ಪ ತಳವಾರ, ಸುಭೇದಾರ ಸಂತೋಷ ಗುರವ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net