ಸೈನ್ಯದಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ವಾಪಾಸಾದ ಮಂಡ್ಯದ ಸೈನಿಕನಿಗೆ ಹೃದಯಸ್ಪರ್ಶಿ ಸ್ವಾಗತ

Imp
Published on

ಮಂಡ್ಯ: ಭಾರತೀಯ ಸೈನ್ಯದಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ವಾಪಸ್ ಬಂದ ತಾಲೂಕಿನ ಬಿ.ಹಟ್ನ ಗ್ರಾಮದ ಮಹದೇವಸ್ವಾಮಿ ಅವರನ್ನು ಭಾನುವಾರ ನಗರದಲ್ಲಿ ಜೀವಧಾರೆ ಟ್ರಸ್ಟ್‌ನಿಂದ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು.

ಹರಿಯಾಣ, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದರು. ನಗರದಲ್ಲಿ ಸ್ವಾಗತಿಸಿದ ಟ್ರಸ್ಟ್‌ನ ಸದಸ್ಯರು, ಶಕ್ತಿ ದೇವತೆ ಕಾಳಿಕಾಂಭ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ಮಹದೇವಸ್ವಾಮಿ ಅವರಿಗೆ ಪುಷ್ಪಾರ್ಚನೆ ಮಾಡಿ ಅಭಿನಂದನೆ ಸಲ್ಲಿಸಿದರು.

ನಂತರ ಸದಸ್ಯರು ಬೈಕ್ ರ‌್ಯಾಲಿ ಮೂಲಕ ಬಿ.ಹಟ್ನ ಗ್ರಾಮದವರೆಗೂ ಮಹದೇವಸ್ವಾಮಿ ಅವರನ್ನು ಕರೆದೊಯ್ದರು. ಗ್ರಾಮದಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಮಹದೇವಸ್ವಾಮಿ ಸೇರಿದಂತೆ ಕುಟುಂಬದವರ ಪಾದಪೂಜೆ ಮಾಡಲಾಯಿತು. ಭಾಗವಹಿಸಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಟ್ರಸ್ಟ್‌ನ ಅಧಕ್ಷ ನಟರಾಜು, ಮಹೇಶ್, ಹನುಮೇಶ್, ಚಲುವ, ಚಂದ್ರು, ತರುಣ, ಪ್ರಶಾಂತ್, ಸಚ್ಚಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net