

ಕೊಪ್ಪಳ (ಅಳವಂಡಿ): ಸರ್ವರು ದೇಶಪ್ರೇಮ ಬೆಳೆಸಿಕೊಳ್ಳಬೇಕು. ದೇಶಸೇವೆಗೆ ಯುವಕರು ಸದಾ ಸಿದ್ಧರಿರಬೇಕು. ದೇಶಸೇವೆ ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದು ನಿವೃತ್ತ ಸೈನಿಕ ಸಿದ್ಧ್ದಲಿಂಗಪ್ಪ ಬಳಗೇರಿ ತಿಳಿಸಿದರು.
ಸಮೀಪದ ಮೈನಹಳ್ಳಿ ಗ್ರಾಮದ ಯೋಧ ಸಿದ್ಧಲಿಂಗಪ್ಪ ಬಳಗೇರಿ ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಯುಕ್ತ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಡಿ ಕಾಯುವ ಸೈನಿಕರು ದಿನದ 24 ಗಂಟೆ ರಾತ್ರಿ, ಹಗಲು, ಚಳಿ, ಮಳೆ, ಗಾಳಿ ಎನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಸೈನದಲ್ಲಿ ಸೇವೆ ಸಲ್ಲಿಸುವದು ಸೌಭಾಗ್ಯ. ಯುವಕರು ಸೈನ್ಯದಲ್ಲಿ ಸೇರಿ ದೇಶ ಸೇವೆ ಮಾಡಬೇಕು ಎಂದರು.
ಸಾಹಿತಿ ಜಿ.ಎಸ್.ಗೋನಾಳ, ಶಿವಕುಮಾರ ಹಿರೇಮಠ, ಬ್ರಹ್ಮಾನಂದ ಬಡಿಗೇರ, ಉಮೇಶ ಪೂಜಾರ, ಸಿದ್ದು ಹಿರೇಮಠ, ಬಸವರಾಜ ಮರದೂರ, ಪ್ರಭು ಚನ್ನದಾಸರ, ಉದಯ ತೋಟದ, ಶರಣು ಮೆತಗಲ್, ಆನಂದ ಗೊಂಡಬಾಳ ಇತರರು ಇದ್ದರು.