ಅನಾರೋಗ್ಯದಿಂದ ಯೋಧ ಸಾವು

Published on

ವಿರಾಜಪೇಟೆ: ರಜೆಗೆಂದು ಆಗಮಿಸಿದ್ದ ಯೋಧನೊಬ್ಬ ಅನಾರೋಗ್ಯದಿಂದ ಗುರುವಾರ ಮೃತಪಟ್ಟಿದ್ದಾರೆ. ವಿರಾಜಪೇಟೆ ಕಿರುಮಕ್ಕಿ ನಿವಾಸಿ ಬೀರಯ್ಯ ಹಾಗೂ ಅಕ್ಕಮ್ಮ ದಂಪತಿ ಪುತ್ರ ರವಿಶಂಕರ್(42) ಮೃತ ಯೋಧ.

ರವಿಶಂಕರ್ ಭಾರತೀಯ ಭೂ ಸೇನೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಮಣಿಪುರದಲ್ಲಿ ಕರ್ತವ್ಯ ನಿರ್ವಹಿಸುತಿದ್ದರು. ಜೂ.29 ರಂದು ರಜೆಗೆ ಊರಿಗೆ ಆಗಮಿಸಿದ್ದರು. ಕಿಡ್ನಿ ಹಾಗೂ ಲಿವರ್ ವೈಫಲ್ಯಗೊಂಡ ಕಾರಣ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದ್ದು ತಕ್ಷಣ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಮಡಿಕೇರಿ ಜಿಲ್ಲಾಸ್ಪತ್ರೆ ಕರೆದುಕೊಂಡುಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇವರಿಗೆ ತಂದೆ, ತಾಯಿ, ಪತ್ನಿ ಇದ್ದಾರೆ. ಶುಕ್ರವಾರ ಆರ್ಜಿ ಗ್ರಾಮದ ಕಿರುಮಕ್ಕಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net