ಕುಸಿದು ಬಿದ್ದು ಯೋಧ ಮೃತ್ಯು

Suicide
Published on

ಕಾಸರಗೋಡು: ವೆಳ್ಳರಿಕುಂಡು ಪನ್ನಿತ್ತಡ್ಕ ನಿವಾಸಿ, ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರುಣ್ ರಾಮ್‌ಕೃಷ್ಣನ್(34) ದೈಹಿಕ ಸಾಮರ್ಥ್ಯ ಪರೀಕ್ಷೆ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದೆಹಲಿಯಲ್ಲಿರುವ ಭಾರತೀಯ ಭೂಸೇನೆಯ ಪ್ರಧಾನ ಕಚೇರಿಯಲ್ಲಿ ಸಿಗ್ನಲ್ ರೆಜಿಮೆಂಟ್‌ನ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು, ಬೆಟಾಲಿಯನ್ ಫಿಸಿಕಲ್ ಎಲಿಜಿಬಿಲಿಟಿ ಟೆಸ್ಟ್ ನಡೆಯುವ ಮಧ್ಯೆ ಕುಸಿದು ಬಿದ್ದಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ತಿಂಗಳ ಹಿಂದೆಯಷ್ಟೆ ರಜೆಯಲ್ಲಿ ಊರಿಗೆ ಬಂದು ವಾಪಸಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net