

ಕೆಜಿಎಫ್- ನಗರ ಹೊರವಲಯದ ಬೆಂಗಳೂರು-&ಚೆನ್ನೆ$ ಎಕ್ಸ್ಪ್ರೆಸ್ ಹೈವೇ ಬಳಿಯ ಬಂಗಾರಪೇಟೆ -ಬೇತಮಂಗಲ ಮುಖ್ಯರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡ ಕಾರು ಮಾರ್ಗ ಬದಿಗೆ ಮರಕ್ಕೂ ಗುದ್ದಿದ್ದು, ಕಾರಿನಲ್ಲಿದ್ದ ಯೋಧ ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟರೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೃಷ್ಣವಾರಂ ನಿವಾಸಿ, ಯೋಧ ಆಕಾಶ್(40) ಮೃತ. ಯೋಧ ಆಕಾಶ್ ಹಾಗೂ ಇತರ ಮೂವರೊಂದಿಗೆ ಬೆಮೆಲ್ ನಗರದಿಂದ ಬೇತಮಂಗಲ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದಿದೆ. ಬಳಿಕ ರಸ್ತೆ ಪಕ್ಕದ ಮರಕ್ಕೂ ಗುದ್ದಿದ್ದು, ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡ ಆಕಾಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೆಮೆಲ್ ನಗರ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.