ಸೈನಿಕ ತರಬೇತಿ ಕೇಂದ್ರ ಬೇಗ ಉದ್ಘಾಟನೆ ಆಗಬೇಕು: ಹವಾಲ್ದಾರ

26GDG02
ಗದಗ ನಗರದ ಅರುಣೋದಯ ಶಾಲೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಾಜಿ ಸೈನಿಕರ ಸಂದ ವಾಷಿರ್ಕ ಮಹಾಸಭೆಯನ್ನು ಸಿ. ಎಸ್​. ಹವಾಲ್ದಾರ ಉದ್ಘಾಟಿಸಿದರು. ತಿರಕನಗೌಡ ಪಾಟೀಲ, ಅಂದಾನಪ್ಪ ಯರಗೇರಿ, ಎಸ್​. ಎನ್​. ಬಳ್ಳಾರಿ ಇತರರು ಇದ್ದರು.
Published on

ಗದಗ:
ಮಾಜಿ ಸೈನಿಕರು ದೇಶಾಭಿಮಾನ, ಶಿಸ್ತು ಮತ್ತು ಬದ್ಧತೆಗೆ ಹೆಸರಾದವರು. ಇದನ್ನು ಸಂಟನೆಯಲ್ಲೂ ಮುಂದುವರೆಸಿ ಸಂದ ಬಲವರ್ಧನೆಗೆ ಮುಂದಾಗಬೇಕು ಎಂದು ನಿವೃತ್ತ ವಾಯು ಸೇನಾಧಿಕಾರಿ ಸಿ. ಎಸ್​. ಹವಾಲ್ದಾರ ಅಭಿಪ್ರಾಯಪಟ್ಟರು.
ನಗರದ ಅರುಣೋದಯ ಶಾಲಾ ಕಟ್ಟಡದ ಸೇವಾ ಚೇತನ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂ ರವಿವಾರ ಏರ್ಪಡಿಸಿದ್ದ ಸರ್ವ ಸದಸ್ಯರ ವಾಷಿರ್ಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಿಲ್ಲಾ ಮಾಜಿ ಸೈನಿಕರ ಸಂ ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಜನಮನ ಸೆಳೆದಿದೆ. ಮಾಜಿ ಸೈನಿಕರನ್ನು, ವೀರನಾರಿಯರನ್ನು ಸಂಟನೆಯಲ್ಲಿ ತೊಡಗಿಸುವ ಮೂಲಕ ಸಂದ ಶಕ್ತಿಯನ್ನು ವೃದ್ಧಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಾಜಿ ಸೈನಿಕರಿಗೆ ವೀರನಾರಿಯರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಹಾಗೂ ದಾಖಲಾತಿಗಳ ಕ್ರೂಢಿಕರಣ, ನವೀಕರಣಗೊಳಿಸುವ ಕಾರ್ಯವನ್ನು ಸಂದ ಪದಾಧಿಕಾರಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿರುವದು ಅಭಿನಂದನೀಯ. ಸಂವು ಗದುಗಿನಲ್ಲಿ ಸೈನಿಕ ಸಮುದಾಯ ಭವನ ಹಾಗೂ ಸೈನಿಕ ತರಬೇತಿ ಕೇಂದ್ರವನ್ನು ನಿಮಿರ್ಸುತ್ತಿದ್ದಾರೆ. ಆದಷ್ಟು ಬೇಗ ತರಬೇತಿ ಕೇಂದ್ರ ಉದ್ಘಾಟನೆ ಆಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಓಂಕಾರೇಶ್ವರ ಹಿರೇಮಠದ ಪಟ್ಟಾಧ್ಯರಾದ ಕೀರೇಶ್ವರ ಸ್ವಾಮೀಜಿ ಮಾತನಾಡಿ, ಮಾಜಿ ಸೈನಿಕರು ನಿವೃತ್ತಿಯ ನಂತರವೂ ಕಾರ್ಯಪ್ರವೃತ್ತರಾಗಿ ಸಕ್ರೀಯಗೊಂಡು ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದ್ದಾರೆ. ಸೈನಿಕ ಸಮುದಾಯ ಭವನ ಹಾಗೂ ಸೈನಿಕ ತರಬೇತಿ ಕೇಂದ್ರ ಬೇಗ ರ್ಪೂಣಗೊಳ್ಳಬೇಕು. ದಾನಿಗಳು ದೇಣಿಗೆ ನೀಡಿ ಯುವ ಜನಾಂಗವನ್ನು ಸೈನ್ಯಕ್ಕೆ ಸೇರುವ ತರಬೇತಿ ಮಾರ್ಗದರ್ಶನ ನೀಡಲು ಸಜ್ಜುಗೊಳಿಸಲಿ ಎಂದರು.
ಅಧ್ಯತೆ ವಹಿಸಿದ್ದ ಸಂದ ಅಧ್ಯ ಗೂಳಯ್ಯ ಮಾಲಗಿತ್ತಿಮಠ ಮಾತನಾಡಿ, ಸರ್ವ ಮಾಜಿ ಸೈನಿಕರ, ವೀರನಾರಿಯರ ಸಹಾಯ, ಸಹಕಾರದೊಂದಿಗೆ ಸಂವನ್ನು ಬಲಗೊಳಿಸುವ ಕಾರ್ಯ ಯಥಾವತ್ತ ಮುಂದುವರೆದಿದ್ದು ಸೈನಿಕ ಸಮುದಾಯ ಭವನ ಹಾಗೂ ಸೈನಿಕ ತರಬೇತಿ ಕೇಂದ್ರದ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ ಎಂದರು.
ಮಾಜಿ ಸೈನಿಕರಾದ ತಿರಕನಗೌಡ ಪಾಟೀಲ, ಅಂದಾನಪ್ಪ ಯರಗೇರಿ, ಎಸ್​. ಎನ್​. ಬಳ್ಳಾರಿ, ಶೇಖಪ್ಪ ಹೊನ್ನಪ್ಪನವರ, ವಾಸಪ್ಪ ಶೆಟವಾಜಿ, ಶಾಂತಮ್ಮ ಹದ್ದಲಿ, ಬಿ. ಜಿ. ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net