

ರಾಮದುರ್ಗ: ವಿದ್ಯಾರ್ಥಿಗಳು ಪ್ರಯತ್ನಪಟ್ಟರೂ ಯಶಸ್ಸು ದೊರೆಯದೇ ಹೋದಲ್ಲಿ ಎದೆಗುಂದದೆ ಮತ್ತೊಮ್ಮೆ ಅಧ್ಯಯನ ಮುಂದುವರಿಸಬೇಕು. ಸೋಲೇ ಗೆಲುವಿನ ಸೋಪಾನ ಎಂದು ಜಮಖಂಡಿ ಬಿಎಲ್‌ಡಿ ಪದವಿ ಮಹಾವಿದ್ಯಾಲಯದ ನಿವತ್ತ ಪ್ರಾಚಾರ್ಯ ಡಾ. ಷಡಕ್ಷರಯ್ಯ ಸುವರ್ಣಖಂಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮೀಪದ ತುರನೂರ ಗ್ರಾಮದ ಫತ್ತೇಪುರ ಗ್ರಾಮೀಣ ವಿದ್ಯಾವರ್ಧಕ ಸಂಘದ ಸವಿತಾ ಶ್ರೀಧರ ಫತ್ತೇಪುರ ಪಪೂ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಫತ್ತೇಪುರ ಗ್ರಾಮೀಣ ವಿದ್ಯಾವರ್ಧಕ ಸಂಘದ ಆಡಳಿತಾಕಾರಿ ಪ್ರೊ. ಜಿ.ಬಿ. ವಡವಡಗಿ ಮಾತನಾಡಿದರು. ಫತ್ತೇಪುರ ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀಧರ ಫತ್ತೇಪುರ, ರಾಚಪ್ಪ ಫತ್ತೇಪುರ, ವಿಶ್ವನಾಥ ಫತ್ತೇಪುರ, ಡಾ. ರಾಜೇಶ ಗುಂಡಾ, ಕಾರ್ಯದರ್ಶಿ ಮತ್ಯುಂಜಯ ಫತ್ತೇಪುರ, ಈಶ್ವರ ಫತ್ತೇಪುರ, ದತ್ತಣ್ಣ ಮಹಾಲಿಂಗಪುರಕರ ಇತರರಿದ್ದರು.