ಸೌರ ವಿದ್ಯುತ್ ಘಟಕಕ್ಕೆ ಚಾಲನೆ

solar plant
Published on

ಹುಬ್ಬಳ್ಳಿ: ನಗರದ ಅಕ್ಷಯ ಪಾತ್ರ ಪ್ರತಿಷ್ಠಾನದ ಬೃಹತ್ ಅಡುಗೆ ಮನೆ ಉಪಯೋಗಕ್ಕಾಗಿ ಸ್ವಿಸ್ ರಿ ಪ್ರತಿಷ್ಠಾನ ಸಹಯೋಗದೊಂದಿಗೆ ಸ್ಥಾಪಿಸಲಾದ ಸೌರ ವಿದ್ಯುತ್ ಘಟಕಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಸುಸ್ಥಿರ ಇಂಧನ ಬಳಕೆ ಹಾಗೂ ಮಕ್ಕಳ ಪೋಷಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಅಕ್ಷಯ ಪಾತ್ರ ಪ್ರತಿಷ್ಠಾನ ಹಾಗೂ ಸ್ವಿಸ್ ರಿ ಪ್ರತಿಷ್ಠಾನಗಳ ನಡುವಿನ ಪಾಲುದಾರಿಕೆಯೇ ಸೌರ ವಿದ್ಯುತ್ ಘಟಕಕ್ಕೆ ಸ್ಥಾಪನೆಗೆ ಕಾರಣವಾಗಿದೆ. ಇದು 47 ಕಿಲೋವ್ಯಾಟ್ ಸಾಮರ್ಥ್ಯದ್ದಾಗಿದ್ದು, ನಿತ್ಯ 178 ಯೂನಿಟ್​ಗಿಂತ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸುವ ನಿರೀಕ್ಷೆ ಹೊಂದಲಾಗಿದೆ.

ಸ್ವಿಸ್ ರಿ ಪ್ರತಿಷ್ಠಾನವು ಅಭಿವೃದ್ಧಿ ಹೊಂದಿದ ಸಮಾಜವನ್ನು ನಿರ್ವಿುಸುವ ನಿಟ್ಟಿನಲ್ಲಿ ಅಕ್ಷಯ ಪಾತ್ರ ಫೌಂಡೇಷನ್ ಜತೆಗಿನ ಪಾಲುದಾರಿಕೆಯನ್ನು ಗೌರವಿಸುತ್ತದೆ. ನಮ್ಮ ಮೂರು ವರ್ಷಗಳ ಸಹಭಾಗಿತ್ವವು ಹಸಿವು ಮತ್ತು ಅಪೌಷ್ಟಿಕತೆ ನಿಮೂಲನೆಯನ್ನು ಬೆಂಬಲಿಸುವ ನಮ್ಮ ದೀರ್ಘಾವಧಿಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷೆ ಸ್ವಾತಿ ಜೆಟ್ಲಿ ಹೇಳಿದರು.

ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ರಾಜೀವ ಲೋಚನದಾಸ ಮಾತನಾಡಿ, ಸ್ವಿಸ್ ರಿ ಪ್ರತಿಷ್ಠಾನದ ಪಾಲುದಾರಿಕೆಗೆ ನಾವು

ಕೃತಜ್ಞರಾಗಿರುತ್ತೇವೆ. ಮಕ್ಕಳಿಗೆ ಪೌಷ್ಟಿಕಾಂಶದ ಊಟವನ್ನು ಒದಗಿಸುವಲ್ಲಿನ ನಮ್ಮ ಪ್ರಯತ್ನಗಳಿಗೆ ಇದು ಪೂರಕವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net