ಸೌರಶಕ್ತಿಯಿಂದ ವಿದ್ಯುತ್​ ಸ್ವಾವಲಂಬನೆ

Siddaganga_Solar
Published on

ತುಮಕೂರು: ನವೀಕರಿಸಬಹುದಾದ ಇಂಧನ ಮೂಲಗಳೇ ಭವಿಷ್ಯದ ಭರವಸೆ. ಈ ನಿಟ್ಟಿನಲ್ಲಿ ವಿದ್ಯುತ್​ ಸ್ವಾವಲಂಬನೆ ಸಾಧಿಸಲು ಸಿದ್ಧಗಂಗಾ ವೈದ್ಯಕಿಯ ಮಹಾವಿದ್ಯಾಲಯ ಸೌರ ವಿದ್ಯುತ್​ ಉತ್ಪಾದಿಸಿ ಪರಿಸರ ಕಾಳಜಿಯ ಬದ್ಧತೆ ನಿರೂಪಿಸಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.

ವಿಜಯಪುರ ಜಿಲ್ಲೆಯ ಝಳಕಿ ಬಳಿ ಇತ್ತೀಚೆಗೆ ನಿಯೋಗ್ರಿನ್​ ಸಂಸ್ಥೆ ಜತೆ ಜಂಟಿಯಾಗಿ ನಿರ್ಮಿಸಿರುವ 2 ಮೆಗಾವ್ಯಾಟ್​ ಸೌರ ವಿದ್ಯುತ್​ ಉತ್ಪಾದನಾ ಟಕಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ವಿದ್ಯುತ್​ ಉತ್ಪಾದನೆಗಾಗಿ ಅತಿವಿರಳವಾಗಿ ಸಿಗುವ ಕಲ್ಲಿದ್ದಲು ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಾಗಿ ಬಸಲಾಗುತ್ತಿದೆ. ಇದು ಪರಿಸರಕ್ಕೆ ಎಂದಿಗೂ ಮಾರಕವಾಗುವಂತಹದ್ದು, ಬೃಹತ್​ ಆರೋಗ್ಯ ಸೇವೆಯ ನಿರ್ವಹಿಸಲು ಪ್ರತಿ ತಿಂಗಳು ಲಾಂತರ ರೂಪಾಯಿ ಮೌಲ್ಯದ ವಿದ್ಯುತ್​ ಬಳಕೆ ಅನಿವಾರ್ಯವಾಗಿತ್ತು. ಇದೀಗ ಸೌರ ಶಕ್ತಿ ಬಳಕೆಯಿಂದ ಪರಿಸರಕ್ಕೆ ಹೆಚ್ಚಿನ ಕೊಡುಗೆ ನೀಡಲಾಗುತ್ತಿದೆ ಎಂದರು.

ಸಿದ್ಧಗಂಗಾ ಆಸ್ಪತ್ರೆ ಆರಂಭದ ದಿನಗಳಲ್ಲೇ ಹೊಸದುರ್ಗ ಬಳಿಯ ಮುತ್ತೋಡು ಎಂಬಲ್ಲಿ 1 ಮೆಗಾ ವ್ಯಾಟ್​ ಸಾಮರ್ಥ್ಯದ ಸೌರ ವಿದ್ಯುತ್​ ಉತ್ಪಾದನ ಟಕ ಸ್ಥಾಪಿಸಲಾಗಿತ್ತು. ಇದೀಗ ಎರಡನೇ ಘಟಕದಿಂದ ಒಟ್ಟು ವಿದ್ಯುತ್​ ವೆಚ್ಚದಲ್ಲಿ ಶೇ.90ರಷ್ಟು ತಗ್ಗಿಸಲಾಗಿದೆ ಎಂದು ಸಿದ್ದಗಂಗಾ ವೈದ್ಯಕಿ ಮಹಾವಿದ್ಯಾಲಯದ ಕಾರ್ಯದರ್ಶಿ ಟಿ.ಎಂ.ಸ್ವಾಮಿ ಹೇಳಿದರು.

ಪೂಜ್ಯರ ದೂರದೃಷ್ಟಿ ಲದಿಂದ ಸೌರ ವಿದ್ಯುತ್​ ಉತ್ಪಾದನಾ ಟಕ ನಿರ್ಮಿಸಲಾಗಿದೆ. ವಿದ್ಯುತ್​ ವೆಚ್ಚ ತಗ್ಗುವುದರಿಂದ ಉಚಿತ ಸೇವೆಯತಹ ಕಾರ್ಯಕ್ರಮಗಳು ಅಬಾಧಿತವಾಗಿ ಸಾಗಲಿದೆ ಎಂದು ಸಿದ್ದಗಂಗಾ ವೈದ್ಯಕಿಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್​.ಪರಮೇಶ್​ ತಿಳಿಸಿದರು.

ನಿಯೋಗ್ರೀನ್​ ಸಿಇಒ ಕೃಷ್ಣ ಕುಲಕರ್ಣಿ, ವೈದ್ಯಕಿಯ ಅಧೀಕ್ಷಕ ಡಾ.ನಿರಂಜನ್​, ಸಿಇಒ ಡಾ.ಸಂಜೀವಕುಮಾರ್​, ಲಕ್ಷಿ$್ಮನಾರಾಯಣ, ಅಮರ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net