SOLAR ಅಳವಡಿಸಿಕೊಳ್ಳಲು ಉತ್ತರ ಕನ್ನಡದಲ್ಲಿ 1849 ಅರ್ಜಿ

SOLAR
Published on

ಕಾರವಾರ: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ Solar  ಸೋಲಾರ್ ಘಟಕ ಪಡೆಯಲು ಜಿಲ್ಲೆಯ 1,849 ಕುಟುಂಬಗಳು ಈಗಾಗಲೇ ಅರ್ಜಿ ಸಲ್ಲಿಸಿವೆ. ಸಂಪರ್ಕ ನೀಡುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಭಟ್ಕಳ ಹೆಬಳೆ ಗ್ರಾಮವನ್ನು ಮಾದರಿ ಸೌರ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ. ಯೋಜನೆಯಡಿ ದೇಶದಾದ್ಯಂತ 1 ಕೋಟಿ ಕುಟುಂಬಗಳಿಗೆ Solar ಸೌರ ಮೇಲ್ಛಾವಣಿ ಸ್ಥಾಪಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್ ವರೆಗೆ ಉಚಿತ,ಕಡಿಮೆ ದರದ ವಿದ್ಯುತ್ ಒದಗಿಸಲು ಸಹಾಯ ಮಾಡಲಾಗುತ್ತಿದೆ. ಈ ಯೋಜನೆಯಿಂದ ಗ್ರಾಹಕರು ತಮ್ಮ ಮನೆಗೆ ತಾವೇ ವಿದ್ಯುತ್ ಉತ್ಪಾದಿಸುವ ಜತೆಗೆ ಹೆಚ್ಚುವರಿ ವಿದ್ಯುತ್‌ನ್ನು ಹೆಸ್ಕಾಂಗೆ ನೀಡಿ ಆರ್ಥಿಕ ಲಾಭ ಪಡೆಯಬಹುದಾಗಿದೆ. ಸರ್ಕಾರಿ ಕಟ್ಟಡಗಳಿಗೂ ವಿದ್ಯುತ್

2551 ಸರ್ಕಾರಿ ಕಟ್ಟಡಗಳಿಗೆ Solar ಅಳವಡಿಕೆ ಯೋಜನೆ

ಜಿಲ್ಲೆಯ 2551 ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.

ಹೆಸ್ಕಾಂ ಮಾಹಿತಿಯಂತೆ ಜಿಲ್ಲೆಯಲ್ಲಿ 2697 ಸರ್ಕಾರಿ ಕಟ್ಟಡಗಳಿದ್ದು ಅವುಗಳಲ್ಲಿ 73 ಕಟ್ಟಡಗಳ ಮೇಲ್ಛಾವಣಿಯಲ್ಲಿ ಈಗಾಗಲೇ ವಿವಿಧ ಯೋಜನೆಗಳಲ್ಲಿ ಸೌರ ವಿದ್ಯುತ್ ಘಟಕ ಅಳವಡಿಸಲಾಗಿದೆ. 73 ಕಟ್ಟಡಗಳಲ್ಲಿ ವಿವಿಧ ಕಾರಣಗಳಿಂದ ಸೋಲಾರ್ ಸ್ಥಾವರಗಳನ್ನು ಅಳವಡಿಸುವುದು ಕಾರ್ಯಸಾದ್ಯವಿಲ್ಲವೆಂದು ಗುರುತಿಸಲಾಗಿದೆ. ಬಾಕಿ ಉಳಿದ ಕಟ್ಟಡಗಳಲ್ಲಿ ಸಮೀಕ್ಷೆ ನಡೆದಿದೆ. 73 ಸರ್ಕಾರಿ ಕಟ್ಟಡಗಳಲ್ಲಿ 406.86 ಕಿಲೋ ವ್ಯಾಟ್ ಸಾಮರ್ಥ್ಯದ ಪ್ಯಾನಲ್ ಅಳವಡಿಸಲಾಗಿದೆ. ಈಗ ಗುರುತಿಸಿರುವ 2,551 ಸರ್ಕಾರಿ ಕಟ್ಟಡಗಳಿಗೆ 73,299 ಕಿ.ವ್ಯಾಸಾಮರ್ಥ್ಯದ ಪ್ಯಾನಲ್ ಅಳವಡಿಸುವ ಯೋಜನೆ ಹೊಂದಲಾಗಿದೆ.

ಎಲ್ಲೆಲ್ಲಿ ಎಷ್ಟು SOLAR ..?

ಹೆಸ್ಕಾ ಶಿರಸಿ ವಿಭಾಗದಲ್ಲಿ 650 ಸರ್ಕಾರಿ ಕಟ್ಟಡಗಳಿದ್ದು, ಇವುಗಳಲ್ಲಿ ಈಗಾಗಲೇ 25 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದೆ. 625 ಕಡೆ ಸೋಲಾರ್ ಅಳವಡಿಸಬಹುದಾಗಿದೆ. ದಾಂಡೇಲಿ ವಿಭಾಗದ 537 ಕಟ್ಟಡಗಳಲ್ಲಿ 26 ಕಟ್ಟಡಗಳಿಗೆ ಸೋಲಾರ್ ಇದೆ. 510 ಕಟ್ಟಡಗಳಲ್ಲಿ ಸೋಲಾರ್ ಅಳವಡಿಸಬಹುದಾಗಿದೆ. ಕಾರವಾರ ವಿಭಾಗದ 1359 ಕಟ್ಟಡಗಳಲ್ಲಿ 12 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 1277 ಕಟ್ಟಡಗಳ ಸಮೀಕ್ಷೆ ನಡೆದಿದೆ. ಹೊನ್ನಾವರ ವಿಭಾಗದ 151 ಕಟ್ಟಡಗಳಲ್ಲಿ 10 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 139 ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದಾಗಿದೆ.

ಮಾದರಿ ಸೌರ ಜಿಲ್ಲೆ ಮಾಡೋಣ

ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಘಟಕ ಅಳವಡಿಸಿ ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿ ಸೋಲಾರ್ ಜಿಲ್ಲೆಯಾಗಿ ಮಾರ್ಪಡಿಸಲು ಕ್ರಮ ವಹಿಸಿ ಎಂದು ಎಡಿಸಿ ಸಾಜಿದ್ ಮುಲ್ಲಾ ಸೂಚಿಸಿದರು.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಜಾರಿ ಕುರಿತು ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಂಪ್ರದಾಯಿಕ ವಿದ್ಯುತ್ ಮೂಲಗಳು ಕಾಲಕ್ರಮೇಣ ನಶಿಸಲಿದ್ದು , ಸೂರ್ಯಶಕ್ತಿಯಿಂದ ದೊರೆಯುವ ವಿದ್ಯುತ್ ಗೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ ಆದ್ದರಿಂದ ವಿದ್ಯುತ್ ಸ್ವಾವಲಂಬನೆ ಸಾಽಸುವ ಉದ್ದೇಶದಿಂದ ಈ ಕ್ರಮ ವಹಿಸೋಣ ಈ ಸಂಬAಧ 15 ದಿನದಲ್ಲಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿ ತಹಸೀಲ್ದಾರ್, ತಾಪಂ ಇಒ, ಲೋಕೋಪಯೋಗಿ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಹೆಸ್ಕಾಂ ನ ಅಧೀಕ್ಷಕ ಇಂಜಿನಿಯರ್ ದೀಪಕ್ ಕಾಮತ್ ಇದ್ದರು.

ಭಟ್ಕಳ ತಾಲೂಕಿನ ಹೆಬಳೆ ಗ್ರಾಮವನ್ನು ಮಾದರಿ ಸೌರ ಗ್ರಾಮ ಯೋಜನೆಗೆ ಆಯ್ಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, 79 ನೀರಾವರಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಅಳವಡಿಸಲು ಸಮೀಕ್ಷೆ ಕೈಗೊಳ್ಳಲಾಗಿದ್ದು,ಶೀಘ್ರದಲ್ಲಿ ಸೋಲಾರ್ ಅಳವಡಿಕೆ ನಡೆಯಲಿದೆ. ದೀಪಕ್ ಕಾಮತ್ ಅಧೀಕ್ಷಕ ಇಂಜಿನಿಯರ್ ಹೆಸ್ಕಾಂ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net