

ಕುಶಾಲನಗರ:
ವಿದ್ಯುತ್ ಬಿಲ್ ಉಳಿತಾಯದ ಉದ್ದೇಶದಿಂದ ನಂಜರಾಯಪಟ್ಟಣ ಗ್ರಾಮದ ವಿವಿಧೆಡೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ.
ನÀಂಜರಾಯಪಟ್ಟಣ ಗ್ರಾಮ ಪಂಚಾಯತಿ ಮಾಸಿಕ ಸಭೆಯ ತೀರ್ಮಾನದಂತೆ ಗ್ರಾಮ ಪಂಚಾಯತಿ ಅನುದಾನ ಬಳಕೆ ಮಾಡಿಕೊಂಡು ಗ್ರಾಮದ ವಿವಿಧ ವಾರ್ಡ್ಗಳಲ್ಲಿ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲಾಗುತ್ತಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳಿಗ ಗ್ರಾಮ, ನಂಜರಾಯಪಟ್ಟಣ, ಸೇರಿದಂತೆ ವಿವಿಧೆಡೆಗಳಲ್ಲಿ ಅಳವಡಿಸುವ ಕಾರ್ಯ ನಡೆದಿದೆ. ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್. ವಿಶ್ವ, ಕಾರ್ಯದರ್ಶಿ ರಾಜಶೇಖರ್ ಹಾಗೂ ಆಯಾಯ ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದರು.