ಸುಸ್ಥಿರ ಕೃಷಿಗೆ ಮಣ್ಣು ಪರೀಕ್ಷೆ ಅಗತ್ಯ, ಯೋಜನಾಧಿಕಾರಿ ಶ್ರೀಕಾಂತ ಹೇಳಿಕೆ

Published on

ಹುಬ್ಬಳ್ಳಿ: ರೈತರು ಸುಸ್ಥಿರ ಕೃಷಿಯನ್ನು ಅನುಸರಿಸಬೇಕಾದರೆ ಮಣ್ಣಿನ ಮಹತ್ವವನ್ನು ಅರಿತುಕೊಂಡು ನಿಯಮಿತವಾಗಿ ಪರೀಕ್ಷೆ ಮಾಡಿಸುವುದು ಅಗತ್ಯ ಎಂದು ಬೆಂಗಳೂರಿನ ಆರ್ಐಡಿಎ್ ಯೋಜನಾಧಿಕಾರಿ ಶ್ರೀಕಾಂತ ಎಸ್.ಪಿ. ಹೇಳಿದರು.

ಕುಂದಗೋಳ ಫಾರ್ಮರ್ಸ್ ಪ್ರೊಡುಸರ್ ಕಂಪನಿ ವತಿಯಿಂದ ನಬಾರ್ಡ್ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ಮಣ್ಣು ಪರೀಕ್ಷೆ ಅಗತ್ಯ ಮತ್ತು ಮಣ್ಣಿನ ಮಾದರಿ ಸಂಗ್ರಹಣೆ ವಿಧಾನಗಳ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಣ್ಣಿನ ರಚನೆ, ಮಣ್ಣಿನ ಪ್ರಕಾರಗಳು ಹಾಗೂ ಗುಣಧರ್ಮಗಳು ಪರೀಕ್ಷೆಯ ಮಹತ್ವ ಮತ್ತು ಮಾದರಿ ಸಂಗ್ರಹಣೆ ಹೇಗೆ ಇತ್ಯಾದಿ ವಿಷಯಗಳ ಮೇಲೆ ಚರ್ಚಿಸಿ ರೈತರಿಗೆ ಮನದಟ್ಟು ಮಾಡಿಕೊಟ್ಟರು.

ತರಬೇತಿ ನಂತರ ರೈತರಾದ ಕರಿಬಸಪ್ಪ ಗಂಗಾಯಿ ಅವರ ಹೊಲದಲ್ಲಿ ಮಣ್ಣಿನ ಮಾದರಿ ಸಂಗ್ರಹಣೆ ಮಾಡುವ ವಿಧಾನವನ್ನು ತೋರಿಸಿಕೊಟ್ಟರು.
ಕುಂದಗೋಳ ಫಾರ್ಮರ್ಸ್ ಪ್ರೊಡುಸರ್ ಕಂಪನಿ ನಿರ್ದೇಶಕರು ಮತ್ತು 50ಕ್ಕೂ ಹೆಚ್ಚು ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು ಎಂದು ಕಂಪನಿಯ ಸಿಇಒ ಸಂಗಮೇಶ ಕುಂದಗೋಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net