ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಸಾಂಪ್ರದಾಯಿಕ ಕೃಷಿ ಪದ್ಧತಿ ಬಳಸಲಿ

5manju2
ಅಗ್ನಿಹೋತ್ರ ಕಾರ್ಯಕ್ರಮಕ್ಕೆ ಶಿವನಗೌಡ ಪಾಟೀಲ, ಬಿ.ಆರ್. ಪಾಟೀಲ ಚಾಲನೆ ನೀಡಿದರು. ಎಸ್.ಬಿ.ಕೊಂಗವಾಡ, ಮಹೇಶ ವಿಜಾಪುರ, ಡಾ.ಮಂಜುನಾಥ ಚೌರೆಡ್ಡಿ ಇತರರಿದ್ದರು.
Published on

ಬೆಳಗಾವಿ: ಅಗ್ನಿಹೋತ್ರ ಮಾಡುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುವುದರ ಜತೆಗೆ ಬೀಜ ಸಂರಕ್ಷಣೆ, ಮಣ್ಣಿನ ಲವತ್ತತೆ ಹೆಚ್ಚಿಸುತ್ತದೆ. ರೈತರು ತಮ್ಮ ಆಧುನಿಕ ಕೃಷಿ ಪದ್ಧತಿ ಜತೆಗೆ ಸಾಂಪ್ರದಾಯಿಕವಾಗಿ ಬೆಳೆದು ಬಂದಿರುವ ಕೃಷಿ ಪದ್ಧತಿಗಳನ್ನು ಮುಂದುವರಿಸುವುದು ಅವಶ್ಯಕವಾಗಿದೆ ಎಂದು ಕೆವಿಕೆ ಹಿರಿಯ ವಿಜ್ಞಾನಿ ಡಾ.ಮಂಜುನಾಥ ಚೌರಡ್ಡಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಕೆಎಲ್ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರ-ಐಸಿಎಆರ್, ಶ್ರೀಸಿದ್ಧಗಿರಿ ನೈಸರ್ಗಿಕ ಮತ್ತು ಸಾವಯವ ಕೃಷಿಕರ ಬಳಗ, ಧಾರವಾಡ ಗ್ರಾಮ ವಿಕಾಸ ಸೊಸೈಟಿ, ಮಂಗಳೂರು ಯೂನಿರ್ವಸಲ್ ನಾಲೇಜ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಗ್ನಿಹೋತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ರೈತರು ಸಾವಯವ ಕೃಷಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡಬೇಕು. ರಾಸಾಯನಿಕ ಗೊಬ್ಬರ, ಔಷಧ ಅತಿಯಾಗಿ ಬಳಕೆಗೆ ಅವಲಂಬನೆ ಆಗಬಾರದು. ನೈಸರ್ಗಿಕ ಗೊಬ್ಬರ ಹಾಕಿ ಬೆಳೆ ಬೆಳೆಯಲು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ಬೆಳಗಾವಿ ಆವೃತ್ತಿ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ ಮಾತನಾಡಿ, ಸದ್ಯದ ಪರಿಸ್ಥಿತಿ ಅಗ್ನಿಹೋತ್ರ ಮಾಡುವ ಅವಶ್ಯಕತೆ ಇದೆ. ನಮ್ಮ ಸುತ್ತಮುತ್ತಲಿನ ವಾತಾವರಣ ಶುದ್ಧವಾದರೆ ಮಾತ್ರ ನಾವೆಲ್ಲ ಆರೋಗ್ಯವಾಗಿರಲು ಸಾಧ್ಯ. ರೈತರು ಸಮಾಜ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಕೆವಿಕೆ ಅಧ್ಯಕ್ಷ ಬಿ.ಆರ್.ಪಾಟೀಲ, ಉಪಕೃಷಿ ನಿರ್ದೇಶಕ ಎಸ್. ಬಿ.ಕೊಂಗವಾಡ ಇತರರಿದ್ದರು.

ಗ್ರಾಮ ವಿಕಾಸ ಸೊಸೈಟಿ, ಯೂನಿರ್ವಸಲ್ ನಾಲೇಜ್‌ಟ್ರಸ್ಟ್ ಮುಖ್ಯಸ್ಥರು, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ರೈತರಿಗೆ ಸಾವಯವ ಕೃಷಿ ಜತೆಗೆ ಅಗ್ನಿಹೋತ್ರದ ಮಹತ್ವ ಕುರಿತು ಅರಿವು ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net