

ಧಾರವಾಡ: ದೇಶದ ಏಕತೆ ಮತ್ತು ಭದ್ರತೆ, ರೈತರ ಏಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಗುರಿ. ಜೊತೆಗೆ ನಮ್ಮ ಮಣ್ಣು ನಮ್ಮ ದೇಶ' ಎಂಬ ಕಲ್ಪನೆಯಿಂದ ಮಣ್ಣು ಸಂಗ್ರಹಿಸಲಾಗುತ್ತಿದ್ದು, ದೆಹಲಿಯಲ್ಲಿ ಮ್ಯೂಸಿಯಂ ಮಾಡಲಾಗುವುದು. ಈ ಮಣ್ಣಿನಿಂದ ದೆಹಲಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಉದ್ಯಾನ ಮಾಡುವ ಕನಸು ಪ್ರಧಾನಿಯವರದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಸತ್ತೂರ ಗ್ರಾಮದಲ್ಲಿ ರೈತ ಮೋರ್ಚಾ ವತಿಯಿಂದ ಶನಿವಾರ ಆಯೋಜಿಸಿದ್ದನಮ್ಮ ಮಣ್ಣು ನಮ್ಮ ದೇಶ' ಕಾರ್ಯಕ್ರಮದ ಅಡಿ ರೈತರಿಂದ ಮಣ್ಣು ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಸರ್ಕಾರ ಯುವಕರಿಗೆ ಕಿರುಕುಳ ನೀಡುತ್ತಿರುವುದು ಖೇದಕರ. ಇದರಿಂದ ಹಿಂದುಗಳಾದ ನಮಗೆ ಹಿಂದು ದೇವರ ಪೂಜೆ ಮಾಡುವುದೂ ಕಷ್ಟಕರವಾಗಿದೆ. ಧ್ವನಿವರ್ದಕ (ಡಿಜೆ) ಹಚ್ಚಲು ಪೋಲಿಸ್ ಆಯುಕ್ತರು ಗಣಪತಿ ಮಂಡಳಿಗಳಿಗೆ ನೀಡುತ್ತಿರುವ ಕಿರುಕಳ ಸಹಿಸುವುದಿಲ್ಲ. ಒಂದುವೇಳೆ ಡಿಜೆಗಳಿಗೆ ಅನುಮತಿ ನೀಡದೆ, ಸಮಯ ನಿಗದಿ ಮಾಡಿದರೆ ಗಣೇಶ ಮೂರ್ತಿಯನ್ನು ನಡುರಸ್ತೆಯಲ್ಲಿ ನಿಲ್ಲಿಸುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಅಮೃತ ದೇಸಾಯಿ, ಸಂಜಯ ಕಪಟಕರ, ಶಂಕರ ಮುಗದ, ಶಿವಣ್ಣ ಬಡವಣ್ಣನವರ, ಮೋಹನ ರಾಮದುಗÀð, ಬಸವರಾಜ ಗರಗ, ಈಶ್ವರಗೌಡ ಪಾಟೀಲ, ಬಸವರಾಜ ಜಾಬಿನ, ಮಂಜುನಾಥ ನೀರಲಕಟ್ಟಿ, ಬಸವರಾಜ ಬಾಳಗಿ, ನೀಲವ್ವ ಅರವಾಳದ, ಜ್ಯೋತಿ ಪಾಟೀಲ, ನೀತಿ ಮಾಳವಳ್ಕರ, ಆನಂದ ಯಾವಗಲ್ಲ, ಇತರರಿದ್ದರು.