ಬಾವಿ ಸುತ್ತಲಿನ ಮಣ್ಣು ಕುಸಿತ

8 RPT 1
ನರೇಗಾ ಯೋಜನೆಯಡಿ ಗವಟೂರಿನ ಕೊಲ್ಲೂರಪ್ಪ ಮನೆ ಎದುರು ತೆರೆದ ಬಾವಿ ಕುಸಿದಿರುವುದು.
Published on

ರಿಪ್ಪನ್‌ಪೇಟೆ: ಎರಡು ವರ್ಷದ ಹಿಂದೆ ನರೇಗಾ ಯೋಜನೆಯಡಿ ಗವಟೂರಿನ ಕೊಲ್ಲೂರಪ್ಪನ ಮನೆ ಎದುರು ಕುಡಿಯುವ ನೀರಿಗಾಗಿ ಸಾರ್ವಜನಿಕ ತೆರೆದ ಬಾವಿ ತೆಗೆಯಲಾಗಿತ್ತು. ಈ ಬಾವಿ ಸುತ್ತಲಿನ ಸಿಮೆಂಟ್ ನೆಲಹಾಸು ಕುಸಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಬಾವಿಯನ್ನು 1.20ಲಕ್ಷ ರೂ. ಅಂದಾಜು ವೆಚ್ಚದಲ್ಲಿ 90 ಸಾವಿರ ರೂ. ಅನುದಾನ ಬಳಸಿಕೊಂಡು 25 ಅಡಿ ಆಳ ತೋಡಿ ರಿಂಗ್ ಅಳವಡಿಸಲಾಗಿದೆ. ಮಳೆಗಾಲ ಆರಂಭ ಆಗಿರುವುದರಿಂದ ರಿಂಗ್ ಸುತ್ತ ನಿರ್ಮಿಸಿದರುವ ಕಾಂಕ್ರೀಟ್ ಕಟ್ಟೆ ಬಿರುಕು ಬಿಟ್ಟಿದ್ದು, ನೆಲ ಕುಸಿದಿದ್ದು ಸುಮಾರು 15 ಅಡಿ ಆಳವಾದ ಕಂದಕ ಉಂಟಾಗಿದೆ. ಬಾವಿಯ ಸುತ್ತ ಯಾರೂ ಹೋಗಲಾರದ ಸ್ಥಿತಿ ಇದ್ದು, ನೀರು ಬಳಸುವ ಜನರು ಬಾವಿಯಿಂದ ನೀರು ಸೇದಲು ಹೆದರುತ್ತಿದ್ದಾರೆ.
ಬಾವಿ ತೆಗೆಯುವಾಗ ತೋರಿದ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಕಾಮಗಾರಿ ಪರಿಣಾಮ ಒಂದೇ ವರ್ಷದಲ್ಲಿ ಕುಸಿದಿದೆ. ಬಾವಿ ಇದ್ದರೂ ಕಾಮಗಾರಿ ಕಳಪೆಯಿಂದಾಗಿ ನೀರು ಎತ್ತಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬAಽಸಿದ ಜನಪ್ರತಿನಿಽಗಳು ಹಾಗೂ ಅಽಕಾರಿಗಳು ಶೀಘ್ರ ಬಾವಿ ದುರಸ್ತಿಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net