ಶೌರ್ಯ ಘಟಕದಿಂದ ಮಣ್ಣು ತೆರವು

Bel_Mannu teravu
Published on

ಬೆಳ್ತಂಗಡಿ: ಪಣಕಜೆಯ ಅರ್ಕಜೆಯಲ್ಲಿ ಕುಸುಮಾವತಿ ಎಂಬುವವರ ಮನೆಗೆ ಬಳಿ ಗುಡ್ಡ ಕುಸಿದು ಮನೆ ಮುಂಭಾಗ ಮಣ್ಣಿನಿಂದ ಸಂಪೂರ್ಣ ಮುಚ್ಚಿ ಹೋಗಿದ್ದು, ತಕ್ಷಣ ಸ್ಪಂದಿಸಿದ ಮಡಂತ್ಯಾರು ಶೌರ್ಯ ಘಟಕದ ಸ್ವಯಂಸೇವಕರು ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು.

ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದರಿಂದ ಸಂಪೂರ್ಣ ತೆರವು ಅಸಾಧ್ಯವಾಗಿದೆ. ತಾತ್ಕಾಲಿಕವಾಗಿ ಮುಂಭಾಗದ ಮಣ್ಣು ತೆರವುಗೊಳಿಸಲಾಯಿತು. ವಲಯ ಮೇಲ್ವಿಚಾರಕಿ ಯಶೋದಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೇವಾಪ್ರತಿನಿಧಿ ಜಾನಕಿ, ಮಡಂತ್ಯಾರು ವಲಯ ಶೌರ್ಯ ಸಂಯೋಜಕಿ ಹರಿಣಾಕ್ಷಿ, ಘಟಕ ಪ್ರತಿನಿಧಿ ಬಾಲಕೃಷ್ಣ ಹಾರಬೆ, ಸ್ವಯಂಸೇವಕರಾದ ಭರತ್ ಕುಮಾರ್, ದಯಾನಂದ ಹಚ್ಚಬೆ, ಯೋಗೀಶ್ ಕೊಡ್ಲಕ್ಕೆ, ಶೋಭಾ, ಬೇಬಿ ವಡ್ಡ, ಸತೀಶ್ ಆಚಾರ್ಯ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net