

ಮೈಸೂರು: ಕರ್ನಾಟಕ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಹೆಸರಘಟ್ಟ ರಸ್ತೆಯ ಆಚಾರ್ಯ ಸ್ಟೇಡಿಯಂನಲ್ಲಿ ನವೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಸಾಫ್ಟ್‌ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಗಂಗಾಧರ ರಾಜು ತಿಳಿಸಿದರು.
ಪಂದ್ಯಾವಳಿಯಲ್ಲಿ ರಾಜ್ಯದ 31 ಜಿಲ್ಲೆಗಳ ಒಟ್ಟು 32 ತಂಡಗಳು ಇವೆ. ಲೆದರ್ ಬಾಲ್ ಕ್ರಿಕೆಟ್ ದುಬಾರಿ ಹಾಗೂ ಹೆಚ್ಚು ಅಭ್ಯಾಸದ ಅಗತ್ಯ ಹೊಂದಿದೆ. ಆದರೆ ಸಾಫ್ಟ್‌ಬಾಲ್ ಕ್ರಿಕೆಟ್ ಗಲ್ಲಿ ಗಲ್ಲಿಗಳಲ್ಲೂ ಆಡುವ ಆಟವಾಗಿವೆ. ಹೀಗಾಗಿ ಈ ಆಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಯಲು ಪ್ರಯತ್ನ ನಡೆಯುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.