

ಮೈಸೂರು : ನಗರದ ಮಹಾಜನ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಮತ್ತು ಆಡಳಿತ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗವು ಅಥರ್ವ ಬಿಸಿವೆಸ್ ಗ್ರೂಪ್, ಮೈಸೂರು ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಅಂತಿಮ ವರ್ಷದ ಬಿಬಿಎ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ವ್ಯಕ್ತಿತ್ವ ಆಭಿವೃದ್ಧಿಗಾಗಿ ಐದು ದಿನಗಳ ಸಾಫ್ಟ್ ಸ್ಕಿಲ್ಸ್ ಗೆ ಸೋಮವಾರ ಚಾಲನೆ ನೀಡಲಾಯಿತು.
ಆಥರ್ವ ಬಿಸಿನೆಸ್ ಗ್ರೂಪ್‌ನ ಮುಖ್ಯ ವಾಣಿಜ್ಯಾಧಿಕಾರಿ ಮೊಹಮ್ಮದ್ ಬಿಲಾಲ್ ಸಿದ್ಧಿಖಿ ಅವರು ರೆಸ್ಯೂಮ್ ಬರೆಯುವ ಕೌಶಲದ ಬಗ್ಗೆ ಚರ್ಚಿಸಿ ಸ್ಥಳದಲ್ಲೇ ವಿದ್ಯಾರ್ಥಿಗಳು ತಮ್ಮ ತಮ್ಮ ರೆಸ್ಯೂಮ್ ಸಿದ್ಧ ಪಡಿಸುವುದು, ಸಂವಹನ ಕೌಶಲ, ಗುಂಪು ಚರ್ಚೆ, ಉದ್ಯೋಗ ಯಶಸ್ವಿಗೆ ತಂತ್ರಜ್ಞಾನ, ಸಂದರ್ಶನಗಳನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಬಿ.ಆರ್. ಜಯಕುಮಾರಿ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ಶಿವ್‌ಕುಮಾರ್, ಕಾರ್ಯಕ್ರಮ ಸಂಯೋಜಕ ಎಸ್.ಕಾವ್ಯಶ್ರೀ, ಸಹ ಸಂಯೋಜಕರಾದ ಅನಿತಾ, ಹೇಮಲತಾ, ವಿಭಾಗದ ಅಧ್ಯಾಪಕರಾದ ಡಾ. ಮುತ್ತಮ್ಮ, ಕೀರ್ತಿ ರಾಜ್‌ಕಮಲ್, ರಶ್ಮಿ ಇತರರು ಇದ್ದರು.