ಬಿತ್ತನೆಗೆ ಹದವಾದ ಮಳೆ ಅಗತ್ಯ

SRT seeds
Published on

ಶಿರಹಟ್ಟಿ: ಅಲ್ಪಸ್ವಲ್ಪ ಮಳೆಯಿಂದ ಭೂಮಿ ತಂಪಾಗಿದ್ದು, ಬಿತ್ತನೆಗೆ ಹದವಾದ ಮಳೆಯ ಅಗತ್ಯವಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರೇವಣ್ಣೆಪ್ಪ ಮನಗೋಳಿ ಹೇಳಿದರು.

ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಶಿರಹಟ್ಟಿ, ಬೆಳ್ಳಟ್ಟಿ ರೈತ ಸಂಪರ್ಕ ಕೇಂದ್ರಗಳಲ್ಲಿ 70 ಕ್ವಿಂಟಾಲ್ ಹೆಸರು ಮತ್ತು 10 ಕ್ವಿಂ. ತೊಗರಿ ಬೀಜ ದಾಸ್ತಾನಿದೆ. ಕೆಲವೇ ದಿನಗಳಲ್ಲಿ ಶೇಂಗಾ ಬೀಜ ದಾಸ್ತಾನು ಮಾಡಲಾಗುತ್ತಿದೆ ಎಂದರು.

ಪ್ರತಿ 5 ಕೆ.ಜಿ. ಹೆಸರು ಬೀಜಕ್ಕೆ 930 ರೂ.ಗಳಿದ್ದು, ಎಸ್ಸಿ, ಎಸ್ಟಿ ರೈತರಿಗೆ ಪ್ರತಿ ಪ್ಯಾಕೇಟಿಗೆ 187.50 ರೂ. ಹಾಗೂ ಸಾಮಾನ್ಯ ರೈತರಿಗೆ 125 ರೂ. ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಇದರಲ್ಲಿ ಎಸ್ಸಿ,ಎಸ್ಟಿ ರೈತರು ಭರಿಸಬೇಕಾದ ವಂತಿಗೆ ಹಣ 742.50 ರೂ. ಹಾಗೂ ಸಾಮಾನ್ಯ ರೈತರ ವಂತಿಗೆ ಹಣ 805 ರೂ. ಆಗಿದೆ. ಹಾಗೆಯೇ ತೊಗರಿ ಬೀಜ ಪ್ರತಿ ಪ್ಯಾಕೇಟಿನ ಪೂರ್ಣದರ 895 ರೂ,ಆಗಿದ್ದು ಎಸ್ಸಿ,ಎಸ್ಟಿ ರೈತರಿಗೆ 187.50 ರೂ.ಹಾಗೂ ಸಾಮಾನ್ಯ ರೈತರಿಗೆ 125 ರೂ. ರಿಯಾಯಿತಿ ದರ ನಿಗದಿಯಾಗಿದೆ. ಜೋಳ ಬೀಜದ ಪ್ರತಿ ಪ್ಯಾಕೇಟಿನ ಪೂರ್ಣದರ 375 ರೂ. ಆಗಿದ್ದು, ಎಸ್ಸಿ,ಎಸ್ಟಿ ರೈತರಿಗೆ 135 ರೂ, ಸಾಮಾನ್ಯ ರೈತರಿಗೆ 90 ರೂ. ರಿಯಾಯಿತಿ ದರ ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ಅಧಿಕಾರಿ ರಮೇಶ ಲಮಾಣಿ ಹಾಗೂ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net