ಸೋಡಿಗದ್ದೆ ಮಹಾಸತಿ ಅಮ್ಮನವರ ಜಾತ್ರೆ 23ರಿಂದ

MARIKAMBA DEVI BHATKAL
Published on

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸುಪ್ರಸಿದ್ಧ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರಾ ಮಹೋತ್ಸವು ಜ. 23ರಿಂದ 31ರವರೆಗೆೆ ಜರುಗಲಿದೆ.

ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಸಾಂಪ್ರದಾಯಿಕ ಧಾರ್ವಿುಕ ವಿಧಿ-ವಿಧಾನಗಳು ನಡೆಯಲಿವೆ. ಅಮ್ಮನವರ ಜಾತ್ರೆಗೆ ಅಕ್ಕ-ಪಕ್ಕದ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸಿ ತಮ್ಮ-ತಮ್ಮ ಸೇವೆ ಹರಕೆಗಳನ್ನು ಸಮರ್ಪಿಸುತ್ತಾರೆ.

ಪೂಜಾ -ಸಾಮಗ್ರಿಗಳಾದ ಹಣ್ಣು ಕಾಯಿ ಇತರೆ ಸೀರೆ-ಕುಪ್ಪಸ, ಉಡಿ ಸಾಮಾನು, ತುಲಾಭಾರ ಸೇವೆ ಸಾಮಗ್ರಿ, ಬಳೆ, ಇತ್ಯಾದಿ ಹರಕೆ ಸಾಮಗ್ರಿಗಳ ಅಂಗಡಿ, ಗೊಂಬೆ ಅಂಗಡಿಗಳನ್ನು ತಾತ್ಕಾಲಿಕವಾಗಿ 9 ದಿನಗಳ ಕಾಲ ಬರುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಪ್ರತಿ ವರ್ಷದಂತೆ ಬಹಿರಂಗ ಹರಾಜು ಪ್ರಕ್ರಿಯೆಮೂಲಕ ಜ. 9ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಸಲಾಗುವುದು ಎಂದು ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net