

ಕಾರವಾರ: ಕರ್ನಾಟಕ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಗೋವಾ ರಾಜ್ಯದಲ್ಲಿ ಕೈಗೊಳ್ಳಲಾಗಿದೆ.! ಹೌದು, ರಸ್ತೆ, ಹಾಗೂ ಮೊಬೈಲ್ ನೆಟ್ವರ್ಕ್ ಸರಿ ಇಲ್ಲದ ಗೋವಾ ರಾಜ್ಯದ ಗಡಿಯಲ್ಲಿರುವ ಕಾರವಾರ ತಾಲೂಕಿನ ಕುಗ್ರಾಮ ಕಮರಗಾಂವನ ಗ್ರಾಮಸ್ಥರನ್ನು ಗೋವಾದ ಸರ್ಕಾರಿ ಕಚೇರಿಯೊಂದಕ್ಕೆ ಕರೆಸಿ,ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಆದರೆ, ನಮ್ಮ ಸಮಸ್ಯೆ ಕೇಳಲು ಬಾರದ ಅಧಿಕಾರಿಗಳು ಈಗ ತಮ್ಮ ಗುರಿ ತಲುಪಲು ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋವಾದ ನೇತ್ರಾವಳಿ ಗ್ರಾಮದ ವಿಲೇಜ್ ಪಂಚಾಯಿತಿ ಆವರಣದಲ್ಲಿ ಕ್ಯಾಂಪ್ ನಡೆಸಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಬೇಕಾದ ಮಾಹಿತಿಯನ್ನು ಪಡೆಯಲಾಯಿತು. ತಹಸೀಲ್ದಾರ್ ನಿಶ್ಚಲ ನರೋನಾ ಹಾಗೂ ತಾಪಂ ಇಒ ವೀರನಗೌಡ ಪಿ.ಏಗನಗೌಡರ್ ಸ್ವತಃ ತೆರಳಿ ಮಾಹಿತಿ ಪಡೆದರು. ಒಟ್ಟು 24 ಕುಟುಂಬಗಳು ತಮ್ಮ ಮಾಹಿತಿ ದಾಖಲಿಸಿದವು. ಇನ್ನೂ 8 ಕುಟುಂಬಗಳು ಬಂದಿಲ್ಲ. ಕುಗ್ರಾಮ: ಕಾರವಾರ ತಾಲೂಕಿನ ಬಾಳ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕಮರಗಾಂವ ಎಂಬ ಗ್ರಾಮ ಸೇರಿದೆ. ಗ್ರಾಮದಲ್ಲಿ 32 ಮನೆಗಳಿವೆ. ಗ್ರಾಮ ಪಂಚಾಯಿತಿಯಿAದ ಕಾಡಿನ ಕಚ್ಚಾ ರಸ್ತೆಯಲ್ಲಿ 17 ಕಿಮೀ ನಡೆದು ಸಾಗಿದರೆ, ಕಮಗರಾಂವ ಗ್ರಾಮ ತಲುಪಬಹುದು. ಗ್ರಾಮಸ್ಥರು, ರೇಶನ್, ಸರ್ಕಾರಿ ಕೆಲಸಗಳಿಗೆ ಕಾರವಾರಕ್ಕೆ ಬರಬೇಕು. ಆದರೆ, ಅವರ ವ್ಯಾವಹಾರಿಕ ಸಂಪರ್ಕವೆಲ್ಲ ಗೋವಾದ ಜತೆಗಿದೆ. ಅಲ್ಲಿನ ಜನ ಗೋವಾ ರಾಜ್ಯಕ್ಕೆ ಉದ್ಯೋಗಕ್ಕೆ ತೆರಳುತ್ತಾರೆ. ಗೋವಾದಿಂದ ಕಚ್ಚಾ ರಸ್ತೆ ಗ್ರಾಮಕ್ಕೆ ಇದೆ. ಕಮರಗಾಂವನಲ್ಲಿ ಮತದಾನ ಕೇಂದ್ರವೊAದಿದ್ದು, ಅದಕ್ಕೂ ಗೋವಾ ಮೂಲಕವೇ ತಲುಪಲಾಗುತ್ತದೆ. ಗ್ರಾಮಕ್ಕೆ ಪಕ್ಕಾ ರಸ್ತೆ ಇಲ್ಲ. ಕಳೆದ ಮೇ ತಿಂಗಳಲ್ಲಿ ಸುರಿದ ಮಳೆ ಸಂದರ್ಭದಲ್ಲಿ ಹಾಳಾದ ವಿದ್ಯುತ್ ಸಂಪರ್ಕ ಇದುವರೆಗೂ ಮರು ಸ್ಥಾಪನೆಯಾಗಿಲ್ಲ. ಈಗ ಕಂಬ ಹಾಕುವ ಕೆಲಸವನ್ನು ಹೆಸ್ಕಾಂ ನಡೆಸಿದ್ದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ರಸ್ತೆ ಇಲ್ಲ. ರೇಶನ್ ಸರಿಯಾಗಿ ತಲುಪುತ್ತಿಲ್ಲ. ಒಟ್ಟಿನಲ್ಲಿ ಕರ್ನಾಟಕ ಸರ್ಕಾರದ ಯಾವುದೇ ಸೌಲಭ್ಯವೂ ಊರಿಗೆ ತಲುಪುತ್ತಿಲ್ಲ.
ಜಿಲ್ಲಾಧಿಕಾರಿ, ಉತ್ತರ ಕನ್ನಡಕೆ.ಲಕ್ಷ್ಮೀಪ್ರಿಯಾ ಗೋವಾ ಸರ್ಕಾರದ ಅಧಿಕೃತ ಅನುಮತಿ ಪಡೆದು, ಗ್ರಾಮಸ್ಥರನ್ನು ನಾಲ್ಕು ಜೀಪ್‌ಗಳ ಮೂಲಕ ನೇತ್ರಾವಳಿ ಗ್ರಾಮಕ್ಕೆ ಕರೆಸಿ ಸಮೀಕ್ಷೆ ನಡೆಸಲಾಗಿದೆ. .............ಕಮರಗಾಂವ ಗ್ರಾಮಸ್ಥಸದಾನಂದ್ಕರ್ನಾಟಕ ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಮ್ಮ ಸಮಸ್ಯೆ ಕೇಳಲು ಅಽಕಾರಿಗಳು ಯಾವಾಗಲೂ ಊರಿಗೆ ಬಂದಿದ್ದೇ ಇಲ್ಲ. ಈಗ ಗೋವಾಕ್ಕೆ ಕರೆಸಿಕೊಂಡು ಸಮೀಕ್ಷೆ ನಡೆಸಿದ್ದಾರೆ. ನಮ್ಮ ಊರಿಗೆ ಸೌಲಭ್ಯ ಕೊಡಿ ಎಂಬುದು ನಮ್ಮ ಆಗ್ರಹವಾಗಿದೆ.