ಸಿದ್ಧಾಂತಗಳಿಂದ ಸರಿದಾರಿಗೆ ಬರಲಿದೆ ಸಮಾಜ

h11-Madva Mahamandal 1
Published on

ಹುಬ್ಬಳ್ಳಿ: ಮಾಧ್ವ ಸಿದ್ಧಾಂತ ಮತ್ತು ಪಂಚಮಸಾಲಿ ಪೀಠದ ಸಿದ್ಧಾಂತ ಬೇರೆಯಲ್ಲ. ಇವರೆಡರ ಉದ್ದೇಶ ಸಮಾಜವನ್ನು ಸರಿದಾರಿಗೆ ತರುವುದು. ನಮ್ಮ ಗುರುಗಳ ಉದ್ದೇಶವೂ ಇದೇ ಆಗಿತ್ತು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ಅಖಿಲ ಭಾರತ ಮಾಧ್ವ ಮಹಾಮಂಡಲ ಉಡುಪಿ ಕೇಂದ್ರ ಕಚೇರಿ ಮತ್ತು ಹುಬ್ಬಳ್ಳಿ ಶಾಖೆ ಆಶ್ರಯದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ಷಷ್ಟ್ಯಬ್ದ ಅಭಿವಂದನಾ, ಸಂತ ಸಂಗಮ ಹಾಗೂ ಪಂ. ಪಂಢರೀನಾಥಾಚಾರ್ಯ ಗಲಗಲಿ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಇಲ್ಲಿನ ದೇಶಪಾಂಡೆ ನಗರ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶ್ವಾಸ ಕೂಡ ಮಂತ್ರವಾಗಬೇಕು. ಅದು ಭಗವಂತನ ಆರಾಧನೆಯಾಗಬೇಕು. ಶ್ವಾಸಕೋಶದಿಂದ ಭಗವಂತನನ್ನು ಆರಾಧನೆ ಮಾಡುವವರು ಜೀವನದಲ್ಲಿ ಸಂತುಷ್ಟರಾಗಿರುತ್ತಾರೆ ಎಂದರು.

ವಚನ ತಿಳಿಸಿದಂತೆ ಅವರ ಸಿದ್ಧಾಂತ ನಮ್ಮ ಸಿದ್ಧಾಂತ ಬೇರೆ ಅಲ್ಲ. ಆದರೆ ಕೆಲವರು ಪ್ರಶ್ನಿಸಿದರು. ವಿದೇಶದ ಮಂದಿಯೂ ಕೂಡಾ ಅವರಿಗೂ ದೀಕ್ಷೆ ನೀಡಿ ಯೋಗ, ಪೂಜೆ ಅನುಷ್ಠಾನ ಮಾಡುತ್ತಿದ್ದಾರೆ ಎಂದು ಹೇಳಿದರು. ಹರಿಹರ ಪಂಚಮ ಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಜೀವನಕ್ಕೂ ಯೋಗ ಜೀವನಕ್ಕೂ ಅನನ್ಯ ಸಂಬಂಧವಿದೆ. ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು. ಶ್ರೀ ವಿಶ್ವೇಶತೀರ್ಥರು ಯೋಗ ಜೀವಿಗಳಾಗಿದ್ದರು. ಈಗಿನ ಶ್ರೀಗಗಳೂ ಕೂಡ ಕ್ರಿಯಾಶೀಲರು ಎಂದರು.

ಮಹಾಮಂಡಳದ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಎಚ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಜಯತೀರ್ಥಾಚಾರ್ಯ ಹುಂಡೇಕಾರ, ಭೀಮಸೇನಾಚಾರ್ಯ ಮಳಗಿ, ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ, ರವಿ ಆಚಾರ್ಯ ಮತ್ತಿಹಳ್ಳಿ, ಮಾತರಿಶ್ವಾಚಾರ್ಯ, ಅಕ್ಷಯ ಉಡುಪ, ವಿದ್ವಾನ್ ಸಮೀರಣಾಚಾರ್ಯ ಕಂಠಪಲ್ಲಿ ಸೇರಿ ಇತರರು ಸಂವಾದ ನಡೆಸಿಕೊಟ್ಟರು.

ಪದ್ಮಶ್ರೀ ಪಂ.ಎಂ. ವೆಂಕಟೇಶಕುಮಾರ ಅವರಿಂದ ದಾಸವಾಣಿ ಪ್ರಸ್ತುತಪಡಿಸಿದರು.

ಮಹಾಮಂಡಳದ ಪ್ರಧಾನ ಅಧ್ಯಕ್ಷ ಎಚ್.ವಿ. ಗೌತಮ, ಕಾರ್ಯದರ್ಶಿ ಅನಂತರಾಜ ಭಟ್, ಅನಂತಪದ್ಮನಾಭ ಐತಾಳ, ಆರ್.ಕೆ. ನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net