ಸಮಾಜದ ಕಲ್ಯಾಣ ಸ್ವಾಮೀಜಿಗಳ ಜವಾಬ್ದಾರಿ

09.kurugodu01
ಕುರುಗೋಡು ತಾಲೂಕಿನ ಸೋಮಸಮುದ್ರದಲ್ಲಿ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದಲ್ಲಿ ಸಿದ್ಧಲಿಂಗ ದೇಶಿಕರ ಚರಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಸೋಮಸಮುದ್ರ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಇದ್ದರು.
Published on

ಕುರುಗೋಡು: ಅರಿಷಡ್ವರ್ಗ ತ್ಯಜಿಸಿ ಸಮಾಜಮುಖಿಯಾಗಿ ಬದುಕುವುದಷ್ಟೇ ಅಲ್ಲ, ಕಲ್ಯಾಣಕ್ಕಾಗಿ ಶ್ರಮಿಸುವುದು ಸ್ವಾಮೀಜಿಗಳ ಜವಾಬ್ದಾರಿ ಎಂದು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಸೋಮಸಮುದ್ರ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾ ವಿರಕ್ತಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿದ್ಧಲಿಂಗ ದೇಶಿಕರ ಚರಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುಪರಂಪರೆ ಎಂಬುವುದು ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಗುರುವಿನ ಆಶೀರ್ವಾದದಿಂದ ಸಿದ್ಧಲಿಂಗ ದೇವರು ಹೋಗಿ ಸಿದ್ಧಲಿಂಗ ಸ್ವಾಮಿಯಾಗಿದ್ದು, ಸರ್ವರ ಏಳಿಗಾಗಿ ಶ್ರಮಿಸಲಿ ಎಂದರು.

ಸಿದ್ಧಲಿಂಗ ದೇಶಿಕರು ಮಾತನಾಡಿ, ಪ್ರತಿಯೊಬ್ಬರೂ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕುವ ಸಂಕಲ್ಪ ಮಾಡಬೇಕು. ಈ ಮೂಲಕ ಯುವ ಸಮೂಹ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೊಡಿಸಬೇಕು. ಯಾವುದೇ ಜಾತಿ, ಮತಕ್ಕೆ ಸೀಮಿತವಾಗದೆ ಪ್ರತಿಯೊಬ್ಬರನ್ನೂ ಸಮಾನವಾಗಿ ನೋಡುವುದು ನನ್ನ ಕರ್ತವ್ಯ. ಉತ್ತಮ ಕಾರ್ಯಕ್ಕೆ ಮಠ ಸದಾ ನಿಮ್ಮೊಂದಿಗೆ ಇರಲಿದೆ ಎಂದರು.

ಕೊಟ್ಟೂರು ಜಗದ್ಗುರು ಬಸವಲಿಂಗ ಸ್ವಾಮೀಜಿ, ಲಿಂಗನಾಯಕನಹಳ್ಳಿ ಜಂಗಮಲಿಂಗ ಕ್ಷೇತ್ರದ ಚನ್ನವೀರ ಸ್ವಾಮೀಜಿ, ಅಕ್ಕಿ ಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ದರೂರು ಸಂಗನಬಸವೇಶ್ವರ ವಿರಕ್ತಮಠದ ಕೊಟ್ಟೂರು ಸ್ವಾಮೀಜಿ, ಗರಗ ಒಪ್ಪತ್ತೇಶ್ವರಸ್ವಾಮಿ ಮಠದ ನಿರಂಜನಪ್ರಭು ಸ್ವಾಮೀಜಿ,

ಬೂದಗುಂಪಾ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ, ಶ್ರೀಧರಗಡ್ಡೆ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠ ಮರಿಕೊಟ್ಟೂರು ದೇಶಿಕರು, ಸಂಗನಹಾಳ ಅನ್ನದಾನೇಶ್ವರ ಶಾಖಾಮಠದ ವಿಶ್ವೇಶ್ವರ ದೇವರು, ಚಿಕ್ಕ ಅಸಂಗಿಯ ವೀರಬಸವ ದೇವರು, ಹಳಿಂಗಳಿ ಶರಣಬಸವ ದೇವರು, ದೋಟಿಹಾಳದ ಚಂದ್ರಶೇಖರ ದೇವರು, ಜಮಖಂಡಿ ಆನಂದ ದೇವರು, ಅರ್ಜುನಗಿ ಗುರುದೇವ ದೇವರು, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕಣೇಕಲ್ ಮಹಾಂತೇಶ್, ಸದಸ್ಯ ಅಲ್ಲಮಪ್ರಭು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net