

ಅಥಣಿ: ಸಮಾಜ ಸೇವೆಯೇ ರೋಟರಿ ಕ್ಲಬ್‌ನ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರೋಟರಿ ಸದಸ್ಯರು ಸ್ವಂತ ಹಣದಲ್ಲಿ ರೆಡಿಮೇಡ್ ಶೌಚಗೃಹ, ಬೆಂಚ್ ನೀಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ಅಥಣಿ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಸಮೀಪದ ಘಟನಟ್ಟಿ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಗೆ ರೋಟರಿ ಕ್ಲಬ್ ಸದಸ್ಯರ ಸಹಯೋಗದಲ್ಲಿ ಶನಿವಾರ ರೆಡಿಮೇಡ್ ಶೌಚಗೃಹ ಹಾಗೂ ಬೆಂಚ್ ವಿತರಿಸಿ ಮಾತನಾಡಿ, ರೋಟರಿ ಕ್ಲಬ್ 25ವರ್ಷಗಳಿಂದ ಆರೋಗ್ಯ, ಶಿಕ್ಷಣದ ಜತೆಗೆ ಅನೇಕ ಸೇವಾಕಾರ್ಯ ಕೈಗೊಂಡಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಮೂಲಸೌಕರ್ಯ ಒದಗಿಸುವುದು ಅವಶ್ಯವಾಗಿದೆ ಎಂದರು. ಅನಿಲ ದೇಶಪಾಂಡೆ, ಅರುಣ ಯಲಗುದ್ರಿ, ಪ್ರಪುಲ್ ಪಡನಾಡ, ಭರತ ಸೊಮಯ್ಯ ಇವರು ಶೌಚಗೃಹ ಮತ್ತು ಬೆಂಚ್ ನೀಡಿರುವುದು ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಸದಸ್ಯರಾದ ಸಂತೋಷ ಬೊಮ್ಮಣವರ, ಶ್ರೀಕಾಂತ ಅಥಣಿ, ಸಚಿನ ದೇಸಾಯಿ, ಶೇಖರ ಕೋಲಾರ, ಸುರೇಶ ಪಾಟೀಲ, ಬಾಳಪ್ಪ ಬುಕಿಟಗಾರ, ನಿಜಗುಣ ಜಿದ್ದಿ ಇತರರು ಇದ್ದರು.